", "articleSection": "Crime,Accident", "image": { "@type": "ImageObject", "url": "https://prod.cdn.publicnext.com/s3fs-public/235762-1738320384-Untitled-design---2025-01-31T161618.143.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnnappaDavanagere" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ದಾವಣಗೆರೆ: ತಡರಾತ್ರಿ ಭೀಕರ ಅಪಘಾತ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಮದುವೆ ಮನೆಗೆ ತೆರಳುತ್ತಿದ್ದವರು ಮಸಣ ಸೇರಿದ್ದಾರೆ. ದಾವಣಗೆರೆ ತಾಲ...Read more" } ", "keywords": "Wedding procession accident, Davanagere news, Two-wheeler accident, Marriage ceremony, Indian wedding traditions, Wedding procession tragedy, Davanagere road accident, Fatal accident, Wedding day tragedy. ,Davangere,Crime,Accident", "url": "https://publicnext.com/node" }
ದಾವಣಗೆರೆ: ತಡರಾತ್ರಿ ಭೀಕರ ಅಪಘಾತ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಮದುವೆ ಮನೆಗೆ ತೆರಳುತ್ತಿದ್ದವರು ಮಸಣ ಸೇರಿದ್ದಾರೆ.
ದಾವಣಗೆರೆ ತಾಲೂಕು ಆರನೇ ಮೈಲಿಗಲ್ಲು (ತರಳಬಾಳು ನಗರ) ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಮೃತರು ಹದಡಿ ಗ್ರಾಮದ ರಾಜು (38), ರಾಮಪ್ಪ (40) ಎಂದು ಗುರುತಿಸಲಾಗಿದೆ. ಮೃತ ದೇಹಗಳನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹದಡಿ ಗ್ರಾಮದಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ದಾವಣಗೆರೆ ಕಡೆಯಿಂದ ಚನ್ನಗಿರಿ ಕಡೆ ಸಂಚರಿಸುತ್ತಿದ್ದ ಬಸ್ ಡಿಕ್ಕಿ ಹೊಡೆದು, ಮನೆಗೆ ನುಗ್ಗಿ ಇಡೀ ಮನೆಯನ್ನು ಹಾನಿ ಮಾಡಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಈ ಕುರಿತು ಹದಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ರಾಮಪ್ಪ, ಹಾಗೂ ರಾಜು ಇಬ್ಬರು ಜೀವದ ಗೆಳೆಯರು ತಮ್ಮದೆ ದ್ವಿಚಕ್ರ ವಾಹನದಲ್ಲಿ ಸಂಬಂಧಿಕರ ಮದುವೆಗೆ ದಾವಣಗೆರೆ ಬರುತ್ತಿದ್ದರು. ಯಮನಂತೆ ಬಂದ ಬಸ್ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮದುವೆ ಮನೆಗೆ ತೆರಳಿ ಸಂಬಂಧಿಕರೊಂದಿಗೆ ಸೇರಿ ಮದುವೆಯಲ್ಲಿ ಭಾಗಿಯಾಗಬೇಕಿದ್ದವರು ಮಸಣ ಸೇರಿದರುವುದು ದುರಂತದ ಸಂಗತಿಯಾಗಿದೆ.
PublicNext
31/01/2025 04:16 pm