", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/462628-1738316370-DVGTHUMB.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnnappaDavanagere" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದಾವಣಗೆರೆ: ರಾಜ್ಯದಲ್ಲಿ ಮತ್ತೊಂದು ಸೆಕ್ಸ್ ಕರ್ಮಕಾಂಡ ಬಯಲಿಗೆ ಬಂದಿದೆ. ಚನ್ನಗಿರಿಯ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜದ್ ಕಾಮಪುರಾಣ ಬಯಲಾಗಿದೆ. ಈ...Read more" } ", "keywords": "Davangere, sex scandal, Karnataka news, Indian news, crime news, sex crime, scandal, investigation, police, law and order, justice, Karnataka government, Indian government, Davangere news, sex scandal updates, crime updates, Karnataka crime news, Indian crime news, sex scandal investigation, police probe, law enforcement, justice system, Karnataka politics, Indian politics, Davangere updates, sex scandal news, crime news updates, Karnataka news updates, Indian news updates, sex crime news, scandal news, investigation news.,Crime", "url": "https://publicnext.com/node" } ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ಸೆಕ್ಸ್ ಕರ್ಮಕಾಂಡ ಬಯಲಿಗೆ....!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ಸೆಕ್ಸ್ ಕರ್ಮಕಾಂಡ ಬಯಲಿಗೆ....!

ದಾವಣಗೆರೆ: ರಾಜ್ಯದಲ್ಲಿ ಮತ್ತೊಂದು ಸೆಕ್ಸ್ ಕರ್ಮಕಾಂಡ ಬಯಲಿಗೆ ಬಂದಿದೆ. ಚನ್ನಗಿರಿಯ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜದ್ ಕಾಮಪುರಾಣ ಬಯಲಾಗಿದೆ. ಈತನ ಲ್ಯಾಪ್ ಟಾಪ್ ಹಾಗೂ ಮೊಬೈಲ್ ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ಜೊತೆಗಿನ ಲೈಂಗಿಕ ಚಟುವಟಿಕೆಯ ಅಶ್ಲೀಲ ವಿಡಿಯೋಗಳನ್ನು ಕಾಮುಕ ರೆಕಾರ್ಡ್ ಮಾಡಿಕೊಂಡಿದ್ದಾನೆ.

30 ಕ್ಕೂ ಅಧಿಕ ಮಹಿಳೆಯರು, ಕಾಲೇಜು ಯುವತಿಯರು ಹಾಗೂ ವಿದ್ಯಾರ್ಥಿನಿಯರ ಜೊತೆ ಲೈಂಗಿಕ ಕ್ರಿಯೆ ನಡೆಸಿ ವಿಡಿಯೋ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈಗ ಒಂದೆರಡು ವಿಡಿಯೋಗಳು ವೈರಲ್ ಆಗಿದ್ದು, ಇದು ಪೊಲೀಸರಿಗೆ ಸಿಕ್ಕಿದೆ.

ದಾವಣಗೆರೆ ನಗರದ 56 ವರ್ಷದ ಅಮ್ಜದ್ ವಿಕೃತ ಕಾಮುಕ. ಶಾಲಾ ಮಕ್ಕಳು, ಕಾಲೇಜು ಯುವತಿಯರು, ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎನ್ನಲಾಗಿದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ 30ಕ್ಕೂ ಅಧಿಕ ವಿಡಿಯೋಗಳು ಇವೆ ಎಂದು ತಿಳಿದು ಬಂದಿದೆ. ಮೆಡಿಕಲ್ ಶಾಪ್ ಗೆ ಬರುವ ಮಹಿಳೆಯರು ,ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡು ಹಣದ ಆಸೆ ಅಥವಾ ಆಮಿಷವೊಡ್ಡಿ ಪುಸಲಾಯಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಹಣದ ಸಹಾಯ ಮಾಡಿ ಲೈಂಗಿಕ ಕ್ರಿಯೆಗೆ ತೊಡಗಿಸಿಕೊಳ್ಳುತ್ತಿದ್ದ ಕಾಮುಕ ಇದಕ್ಕಾಗಿ ಚನ್ನಗಿರಿ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದ ಎಂದೂ ಹೇಳಲಾಗಿದೆ.

ಸುಮೋಟೊ ಕೇಸ್ ದಾಖಲಿಸಿಕೊಂಡು ಅಮ್ಜದ್ ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಂತ್ರಸ್ತೆಯರ ಕುಟುಂಬ ಸಂಪರ್ಕಿಸುವ ಕೆಲಸ ನಡೆಯುತ್ತಿದ್ದು, ಶಾಲಾ ಬಾಲಕಿಯರ ಜೊತೆಗೂ ಈತ ಲೈಂಗಿಕ ಕ್ರಿಯೆ ನಡೆಸಿ ಅಶ್ಲೀಲ ವಿಡಿಯೋ ಮಾಡಿದ್ದಾನೆ. ಈತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗುವ ಸಾಧ್ಯತೆ ಹೆಚ್ಚಿದೆ.

Edited By :
PublicNext

PublicNext

31/01/2025 03:11 pm

Cinque Terre

46.12 K

Cinque Terre

7