", "articleSection": "Infrastructure,Sports,Human Stories", "image": { "@type": "ImageObject", "url": "https://prod.cdn.publicnext.com/s3fs-public/378325-1738320389-9.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಗವರ್ನ್ ಮೆಂಟ್ ಆರ್ಟ್ಸ್ ಕಾಲೇಜಿನಲ್ಲಿ ಕೆಲಸ ಮಾಡಿ ಸಂಬಳ ಪಡೆಯೋ ಪ್ರಿನ್ಸಿಪಾಲ್ ಶ್ರೀನಿವಾಸ್, ಬಡ ಮಕ್ಕಳ ಕ್ರೀಡಾ ಕನಸನ್ನ ಚಿವುಟಿ ಹ...Read more" } ", "keywords": "Bangalore, Government Playground, Commercialization, School Principal, Karnataka News, Education Department, Bangalore City, Playground Controversy, Government Land, Commercial Activities.,Bangalore-Rural,Infrastructure,Sports,Human-Stories", "url": "https://publicnext.com/node" }
ಬೆಂಗಳೂರು: ಗವರ್ನ್ ಮೆಂಟ್ ಆರ್ಟ್ಸ್ ಕಾಲೇಜಿನಲ್ಲಿ ಕೆಲಸ ಮಾಡಿ ಸಂಬಳ ಪಡೆಯೋ ಪ್ರಿನ್ಸಿಪಾಲ್ ಶ್ರೀನಿವಾಸ್, ಬಡ ಮಕ್ಕಳ ಕ್ರೀಡಾ ಕನಸನ್ನ ಚಿವುಟಿ ಹಾಕಿದ್ರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಪ್ರಿನ್ಸಿಪಾಲ್ ಶ್ರೀನಿವಾಸ್ ಹಣದಾಸೆಗೆ ಸರ್ಕಾರಿ ಕಾಲೇಜಿನ ಬಡಮಕ್ಕಳ ಕನಸಿಗೆ ಕೊಳ್ಳಿ ಇಟ್ಟ ಆರೋಪವಿದೆ.
ಖಾಸಗಿ ಕ್ರಿಕೆಟ್ ಕ್ಲಬ್‌ನೊಂದಿಗೆ ಕೈ ಜೋಡಿಸಿ ಕಾಲೇಜಿಗೆ ಸೇರಿದ ಕ್ರೀಡಾಂಗಣವನ್ನೇ ಪ್ರಿನ್ಸಿಪಾಲ್ ಮಾರಾಟ ಮಾಡಿದ್ದಾರೆಂದು ಆರೋಪವಿದೆ. ಅದಕ್ಕೆ ಕೈ ಕನ್ನಡಿಯಂತೆ ಮೈದಾನದಲ್ಲಿ ಖಾಸಗಿ ಕ್ರಿಕೆಟ್ ಕ್ಲಬ್‌ನವರು ಕ್ರಿಕೆಟ್ ಪ್ರಾಕ್ಟೀಸ್ ಮಾಡ್ತಿರೋ ವೀಡಿಯೋ ಸಾಕ್ಷಿಯಾಗಿದೆ.
ಪ್ರಿನ್ಸಿಪಾಲ್ ವಿರುದ್ಧ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದು, ಸಮಗ್ರ ತನಿಖೆಗೆ ವಿದ್ಯಾರ್ಥಿಗಳು ಆಗ್ರಹ ಮಾಡ್ತಿದ್ದಾರೆ. ಮೈದಾನ ಸರ್ಕಾರಿ ಕಾಲೇಜಿಗೆ ಸೇರಿದ್ದು. ಆದ್ರೆ ಅಲ್ಲಿ ವ್ಯಾಸಂಗ ಮಾಡೋ ವಿದ್ಯಾರ್ಥಿಗಳಿಗೆ ಆಟ ಆಡೋದಕ್ಕೆ ಅವಕಾಶ ಇಲ್ವಂತೆ.
ಖಾಸಗಿ ಕ್ರೀಡಾ ಕೋಚಿಂಗ್ ಸೆಂಟರ್ ಅವ್ರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡ್ತಾರೆ ಎಂದು ಹೇಳಲಾಗಿದೆ. ಸದ್ಯ ಪ್ರಿನ್ಸಿಪಾಲ್ ವಿರುದ್ಧ ದೂರು ಹೋಗಿದ್ದು, ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ತಾರೆ ಎಂದು ಕಾದು ನೋಡಬೇಕಿದೆ.
PublicNext
31/01/2025 04:16 pm