", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1738294715-WhatsApp-Image-2025-01-31-at-8.39.37-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ನಕಲಿ ದಾಖಲೆ ಸೃಷ್ಟಿಸಿ ಅಪರಿಚಿತನೊಬ್ಬ ಶಿವಮೊಗ್ಗ ನ್ಯಾಯಾಲಯದಲ್ಲಿ ಐವರು ಆರೋಪಿಗಳಿಗೆ ಜಾಮೀನು ನೀಡಿದ್ದಾನೆ. ಆರೋಪಿಯೊಬ್ಬ ವಿಚಾರಣೆ...Read more" } ", "keywords": "Shivamogga, Fake Documents, Bail, Crime Exposed, Karnataka Police, Investigation, Forgery Case, Legal Proceedings, Judicial Process.,Shimoga,Crime,Law-and-Order", "url": "https://publicnext.com/node" } ಶಿವಮೊಗ್ಗ : ನಕಲಿ ದಾಖಲೆ ಸೃಷ್ಟಿಸಿ ಜಾಮೀನು, ಪ್ರಕರಣ ಬೆಳಕಿಗೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ನಕಲಿ ದಾಖಲೆ ಸೃಷ್ಟಿಸಿ ಜಾಮೀನು, ಪ್ರಕರಣ ಬೆಳಕಿಗೆ

ಶಿವಮೊಗ್ಗ : ನಕಲಿ ದಾಖಲೆ ಸೃಷ್ಟಿಸಿ ಅಪರಿಚಿತನೊಬ್ಬ ಶಿವಮೊಗ್ಗ ನ್ಯಾಯಾಲಯದಲ್ಲಿ ಐವರು ಆರೋಪಿಗಳಿಗೆ ಜಾಮೀನು ನೀಡಿದ್ದಾನೆ. ಆರೋಪಿಯೊಬ್ಬ ವಿಚಾರಣೆಗೆ ಹಾಜರಾಗದಿದ್ದಾಗ ಜಾಮೀನುದಾರನಿಗೆ ನೊಟೀಸ್‌ ಜಾರಿಯಾಗಿದೆ. ಆಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣವೊಂದರ ಆರೋಪಿಗಳಾದ ಇಬ್ರಾಹಿಂ ಖಲೀಲ್‌, ಫೈರೋಜ್‌, ಅರ್ಬಾಜ್‌, ನಯಾಜ್‌ ಅಹಮದ್‌, ಸುಹೇಲ್‌ ಎಂಬುವವರಿಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಜಗದೀಶ್‌ ಎಂಬುವವರು ಶಿವಮೊಗ್ಗ ನ್ಯಾಯಾಲಯದಲ್ಲಿ ಜಾಮೀನಾಗಿದ್ದರು.

ಪ್ರಕರಣದ ಐದನೇ ಆರೋಪಿ ಸುಹೇಲ್‌ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಆಗ ಜಾಮೀನುದಾರ ಜಗದೀಶ್‌ಗೆ ನೊಟೀಸ್‌ ಜಾರಿಯಾಗಿತ್ತು. ನ್ಯಾಯಾಲಯಕ್ಕೆ ಹಾಜರಾದ ಜಗದೀಶ್‌, ತಾನು ಯಾರಿಗೂ ಜಾಮೀನು ನೀಡಿಲ್ಲ. ಪ್ರಮಾಣಪತ್ರದಲ್ಲಿರುವ ಫೋಟೊ ತನ್ನದಲ್ಲ. ಆರೋಪಿಗಳ್ಯಾರೂ ತನಗೆ ಪರಿಚಯವಿಲ್ಲ ಎಂದು ನ್ಯಾಯಾಧೀಶರ ಮುಂದೆ ತಿಳಿಸಿದ್ದರು.

ನಕಲಿ ದಾಖಲೆ ಸೃಷ್ಟಿಸಿ ಜಾಮೀನುದಾರ ಎಂದು ಬಿಂಬಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾದ ವ್ಯಕ್ತಿ, ಆತನನ್ನು ಕರೆತಂದಿದ್ದ ನಸರುಲ್ಲಾ, ಪ್ರಕರಣದ ಐವರು ಆರೋಪಿಗಳ ವಿರುದ್ಧ ನ್ಯಾಯಾಲಯದ ಸೂಚನೆ ಮೇರೆಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
PublicNext

PublicNext

31/01/2025 09:09 am

Cinque Terre

8.55 K

Cinque Terre

0

ಸಂಬಂಧಿತ ಸುದ್ದಿ