", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1738246924-tmk.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "KumarTumakur" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಮಕೂರು: ಗೃಹ ಸಚಿವರ ಕೇತ್ರದಲ್ಲಿಯೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾವಳಿ ಹೆಚ್ಚಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತ ಮಹಿ...Read more" } ", "keywords": "Tumakuru, Microfinance Harassment, Home Minister's Constituency, Women's Empowerment, Financial Exploitation, Suicide Attempt, Karnataka News, Tumakuru District, Microfinance Institutions, Financial Inclusion, Rural Development.,Tumkur,Crime,Law-and-Order", "url": "https://publicnext.com/node" } ತುಮಕೂರು: ಗೃಹ ಸಚಿವರ ಕ್ಷೇತ್ರದಲ್ಲೂ ಮೈಕ್ರೋ ಫೈನಾನ್ಸ್ ಹಾವಳಿ - ಮಹಿಳೆ ಆತ್ಮಹತ್ಯೆಗೆ ಯತ್ನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಗೃಹ ಸಚಿವರ ಕ್ಷೇತ್ರದಲ್ಲೂ ಮೈಕ್ರೋ ಫೈನಾನ್ಸ್ ಹಾವಳಿ - ಮಹಿಳೆ ಆತ್ಮಹತ್ಯೆಗೆ ಯತ್ನ

ತುಮಕೂರು: ಗೃಹ ಸಚಿವರ ಕೇತ್ರದಲ್ಲಿಯೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾವಳಿ ಹೆಚ್ಚಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊರಟಗೆರೆ ತಾಲ್ಲೂಕಿನ ಅಲ್ಲಾಳಸಂದ್ರ ಹನುಮಂತಪುರದ ಮಂಗಳಮ್ಮ (45) ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಎರಡು ದಿನಗಳಿಂದ ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದರು. ಬುಧವಾರ ಗ್ರಾಮೀಣ ಕೂಟದ ಸಿಬ್ಬಂದಿ ಬಂದು ಕಂತಿನ ಹಣ ಕೇಳಿದ್ದಾರೆ. ಮಂಗಳಮ್ಮ 'ಇವತ್ತು ಹಣ ಇಲ್ಲ, ಕಟ್ಟಲು ಆಗಲ್ಲ' ಎಂದು ಹೇಳಿದ್ದಾರೆ. ಹಣ ಕೊಡುವ ತನಕ ಇಲ್ಲಿಂದ ಹೋಗಲ್ಲ ಎಂದು ಸಿಬ್ಬಂದಿ ಮನೆ ಮುಂಭಾಗ ಕುಳಿತಿದ್ದರು. ಇದರಿಂದ ಬೇಸತ್ತು ರಕ್ತದೊತ್ತಡದ ಮಾತ್ರೆಗಳನ್ನು ಸೇವಿಸಿದ್ದಾರೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಹೋಟೆಲ್ ಆರಂಭಿಸುವ ಉದ್ದೇಶದಿಂದ ಒಂದು ವರ್ಷದ ಹಿಂದೆ ಮಂಗಳಮ್ಮ ಕುಟುಂಬ ಗ್ರಾಮೀಣ ಕೂಟದಲ್ಲಿ 2 ಲಕ್ಷ ರೂಪಾಯಿ, ಎಲ್ ಆ್ಯಂಡ್ ಟಿಯಲ್ಲಿ 70 ಸಾವಿರ ರೂಪಾಯಿ, ಆಶೀರ್ವಾದ ಸಂಸ್ಥೆಯಲ್ಲಿ 80 ಸಾವಿರ ರೂಪಾಯಿ ಸಾಲ ಪಡೆದಿತ್ತು. ಹೋಟೆಲ್‌ನಿಂದ ನಷ್ಟ ಅನುಭವಿಸಿದ ಬಳಿಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಮಧ್ಯೆ ಸಾಲ ಮರುಪಾವತಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಒತ್ತಡ ಹೆಚ್ಚಾಗಿದೆ. ಪತ್ನಿ ಬಸವರಾಜು, ಪುತ್ರ ಪುನೀತ್ ಸಾಲ ತೀರಿಸಲು ಪರದಾಡುತ್ತಿದ್ದಾರೆ.

Edited By : Manjunath H D
PublicNext

PublicNext

30/01/2025 07:52 pm

Cinque Terre

16.47 K

Cinque Terre

0