ಉಡುಪಿ : ವೇಶ್ಯಾವಾಟಿಕೆಗೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ನಗರದ ಕಿನ್ನಿಮೂಲ್ಕಿಯಲ್ಲಿರುವ ಲಾಡ್ಜ್ ಗೆ ದಾಳಿ ನಡೆಸಿ ಓರ್ವ ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದ ತಂಡ ಹೊಟೇಲಿನ ರೂಮಿಗೆ ದಾಳಿ ನಡೆಸಿ ಕೃತ್ಯಕ್ಕೆ ಸಂಬಂಧಿಸಿದ ಸೊತ್ತುಗಳನ್ನು ಪಡಿಸಿಕೊಂಡು, ಓರ್ವ ಸಂತ್ರಸ್ಥೆಯನ್ನು ರಕ್ಷಿಸಿದ್ದಾರೆ.
ಕೇಶವ ಎಂಬಾತ ಸಂತ್ರಸ್ಥೆಗೆ ಕೆಲಸ ಕೊಡುವುದಾಗಿ ಪುಸಲಾಯಿಸಿ ಶಿವಮೊಗ್ಗದಿಂದ ಹೊಟೇಲಿಗೆ ಕರೆದುಕೊಂಡು ಬಂದು ಆಕೆಯನ್ನು ಬಲವಂತವಾಗಿ ಅನೈತಿಕ ವೇಶ್ಯಾವಾಟಿಕೆ ಚಟುವಟಿಕೆ ಮಾಡುವಂತೆ ಒತ್ತಾಯ ಮಾಡಿ ಇರಿಸಿಕೊಂಡಿದ್ದಾನೆಂದು ದೂರಲಾಗಿದೆ. ಆರೋಪಿ ಜಗನ್ನಾಥ ತನ್ನ ಹೊಟೇಲ್ ನಲ್ಲಿ ವೇಶ್ಯಾ ವೃತ್ತಿಗೆ ಅನುವು ಮಾಡಿ ಕೊಟ್ಟಿದ್ದು, ಆರೋಪಿಗಳು ಅಕ್ರಮವಾಗಿ ಈ ದಂಧೆ ನಡೆಸುತ್ತಿರುವುದಾಗಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
30/01/2025 06:04 pm