", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/43595620250129120205filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಪುತ್ತೂರು: ಹತ್ತು, ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದಿತ್ತೆನ್ನಲಾದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂ...Read more" } ", "keywords": "Node,Mangalore,Crime,Udupi", "url": "https://publicnext.com/node" }
ಪುತ್ತೂರು: ಹತ್ತು, ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದಿತ್ತೆನ್ನಲಾದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಫೊಕ್ಸೊ ಪ್ರಕರಣ ಎದುರಿಸುತ್ತಿದ್ದ ಆರೋಪಿ ಪುತ್ತೂರು ಮಹಿಳಾ ಠಾಣೆಗೆ ಬಂದು ಶರಣಾಗಿದ್ದಾನೆ.
ಆರೋಪಿಯನ್ನು ಸಂಶುದ್ದೀನ್ ಎಂದು ಗುರುತಿಸಲಾಗಿದೆ ಪ್ರಸ್ತುತ 15 ವರ್ಷ ಪ್ರಾಯದ ಹುಡುಗಿ 5 ವರ್ಷದ ಬಾಲಕಿಯಾಗಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಆತನ ಮೇಲಿತ್ತು. ಶಾಲೆಗೆ ಹೋಗುತ್ತಿರುವ ಬಾಲಕಿ ವರ್ಷದ ಹಿಂದೆ ತನ್ನ ನಿಕಟ ಸಂಬಂಧಿಕರ ಜತೆ ಕೇರಳಕ್ಕೆ ಹೋಗಿದ್ದು, ಅಲ್ಲಿದ್ದಾಗ ಮಾನಸಿಕವಾಗಿ ಕುಗ್ಗಿದ್ದಳು. ಈ ಸಂದರ್ಭ ಆಕೆಯನ್ನು ವೈದ್ಯಕೀಯ ಕೌನ್ಸೆಲಿಂಗ್ ಮಾಡಿದಾಗ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿನೀಡಿದ್ದಳು.ಈವಿಚಾರವನ್ನು ಕೇರಳ ಪೊಲೀಸರ ಗಮನಕ್ಕೆ ತರಲಾಗಿತ್ತು. ತಿರುವನಂತಪುರ ಪೊಲೀಸರು ಪ್ರಕರಣವನ್ನು ಪುತ್ತೂರು ಮಹಿಳಾ ಠಾಣೆಗೆ ಹಸ್ತಾಂತರಿಸಿದ್ದರು.
ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಫೊಕ್ಸೊ
ಪ್ರಕರಣ ದಾಖಲಾಗಿದ್ದು, ಆರೋಪಿಗೆ ಶೋಧ ನಡೆಸಲಾಗುತ್ತಿತ್ತು.
Kshetra Samachara
29/01/2025 12:02 pm