ಯಾದಗಿರಿ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಸುರಪುರ ನಗರಕ್ಕೆ ಮನೆ ಮನೆಗೆ 24 x7 ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, 8 ಸಾವಿರ ಲೀಟರ್ ನೀರು ಉಪಯೋಗಿಸಿದರೆ ತಿಂಗಳಿಗೆ 56 ರೂಪಾಯಿ ತೆಗೆದುಕೊಳ್ಳುವ ಬದಲು ನಗರಸಭೆ ಅಧಿಕಾರಿಗಳು 120 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ರಾಜೂಗೌಡ ಜನವರಿ 11ರಂದು ಆರೋಪಿಸಿದ್ದರು. ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿದ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ನಗರಸಭೆಯಲ್ಲಿ ಜರುಗಿದ ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ಸದಸ್ಯರು ಹಾಗೂ ನಿಗಮದ ಅಧಿಕಾರಿಗಳ ಒಪ್ಪಿಗೆ ಮೇರೆಗೆ ದರ ನಿಗದಿಸಲಾಗಿದೆ ಎಂದರು.
ಇನ್ನು ಜನರು ತಮಗೆ ಅನುಕೂಲವಾದಷ್ಟು ಹಣ ಕಟ್ಟಲಿ, ಎಲ್ಲಾ ಹಣ ನಗರಸಭೆ ಖಾತೆಗೆ ಜಮೆಯಾಗಲಿದ್ದು, ಅಭಿವೃದ್ಧಿಗೆ ಅನುಕೂಲ ಎಂದರು. ಮಾಜಿ ಸಚಿವರು ಜನರ ದಾರಿ ತಪ್ಪಿಸೋ ಕೆಲಸ ಮಾಡಿದ್ದು, ರಾಜಕೀಯ ಬೆಳೆ ಬೇಯಿಸಿಕೊಳ್ಳತ್ತಿದ್ದಾರೆ ಅಂತಾ ಹೇಳಿದರು. ಇನ್ನು ಮಾಜಿ ಸಚಿವರ ಅಧಿಕಾರದಲ್ಲಿ ಈ ಯೋಜನೆಯ ಕೆಲ ಟ್ಯಾಂಕ್ ಗಳು ಡಸ್ಟ್ ನಿಂದ ನಿರ್ಮಿಸಲು ಮುಂದಾಗಿದ್ದು, ಅದರ ಸಾಕ್ಷಿ ನಮ್ಮಲ್ಲಿವೆ ಎಂದರು.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
Kshetra Samachara
30/01/2025 05:22 pm