ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ : ಇಡಿ ನೋಟಿಸ್‌ ಗೆ ಕಾಂಗ್ರೆಸ್ ಶಾಸಕ ಕಿಡಿ

ಮಡಿಕೇರಿ : ಮುಡಾ ಹಗರಣದ ಪ್ರಕರಣದಲ್ಲಿ ಇಡಿ ಎಂಟ್ರಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ‌ ನಡೆ ಬಗ್ಗೆ ಶಾಸಕ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮುಡಾ ಹಗರಣ ವಿಚಾರದಲ್ಲಿ‌ ಅಪರಾಧವೇ ನಡೆದಿಲ್ಲ ಅಪರಾಧ ನಡೆದಿದ್ದರೆ ಈ‌ ಮೊದಲೇ ಇಡಿ ಎಂಟ್ರಿ ಆಗುತ್ತಿತ್ತು. ಇಡಿ ಅವರ ಕ್ರಮ ಕಾನೂನು ಬಾಹಿರ ಎಂದು ಹೈಕೋರ್ಟ್ ಈ ಹಿಂದೆ ಹೇಳಿದೆ. ವಾಲ್ಮೀಕಿ ಪ್ರಕರಣದಿಂದ ನಾವು ಇದನ್ನೇ ಹೇಳುತ್ತಿದ್ದೇವೆ ವಿಧಾನಸಭೆಯಲ್ಲೂ ಇಡಿ ಕ್ರಮದ ಬಗ್ಗೆ ಮಾತಾಡಿದ್ದೇನೆ. ಬಿಜೆಪಿ ಯೇತರ ಸರಕಾರ ಇರುವ ಕಡೆ ಮಾತ್ರ ಇಡಿ ಎಂಟ್ರಿಯಾಗುತ್ತೆ. ಮುಡಾ ಪ್ರಕರಣದ ತನಿಖೆ‌ ಪಾರದರ್ಶಕವಾಗಿ ನಡೆಯುತ್ತಿದೆ. ಆದರೂ ಸಿಎಂ ಪತ್ನಿಗೆ, ನಗರಾಭಿವೃದ್ಧಿ ಸಚಿವರಿಗೆ ನೋಟಿಸ್ ನೀಡಲಾಗಿದೆ ಇಡಿ ನಡೆ ಕಾಂಗ್ರೆಸ್ ವಿರುದ್ದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .

Edited By : PublicNext Desk
PublicNext

PublicNext

30/01/2025 05:11 pm

Cinque Terre

8.03 K

Cinque Terre

0

ಸಂಬಂಧಿತ ಸುದ್ದಿ