", "articleSection": "Health & Fitness", "image": { "@type": "ImageObject", "url": "https://prod.cdn.publicnext.com/s3fs-public/229640-1738231157-mng.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "Viswanath ಮಂಗಳೂರು: ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಜಾಯಿಂಟ್ ಬದಲಾವಣೆಗಾಗಿ ರೋಬೋಟಿಕ್ ಮಾದರಿಯ ಸ್ಮಿತ್ + ನೆಫ್ಯೂದವರ ಜಾಯಿಂಟ್ ...Read more" } ", "keywords": "Mangalore, AJ Hospital, Robotic Joint Replacement, Orthopedic Surgery, Medical Technology, Healthcare Services, Joint Replacement Surgery, Robotic Surgery, Knee Replacement, Hip Replacement, Mangalore Hospitals, Karnataka Healthcare.,Udupi,Health-and-Fitness", "url": "https://publicnext.com/node" }
Viswanath
ಮಂಗಳೂರು: ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಜಾಯಿಂಟ್ ಬದಲಾವಣೆಗಾಗಿ ರೋಬೋಟಿಕ್ ಮಾದರಿಯ ಸ್ಮಿತ್ + ನೆಫ್ಯೂದವರ ಜಾಯಿಂಟ್ ರಿಪ್ಲೇಸ್ಮೆಂಟ್ ಟೆಕ್ನಾಲಜಿಯನ್ನು ಬಿಡುಗಡೆಗೊಳಿಸಿದ್ದು, ಆಸ್ಪತ್ರೆಯ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಉದ್ಘಾಟಿದ್ದಾರೆ ಎಂದು ಎ.ಜೆ.ಆಸ್ಪತ್ರೆ ಮತ್ತು ರೀಸರ್ಚ್ ಸೆಂಟರ್ನ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು 2001ರಲ್ಲಿ ತನ್ನ ಆರಂಭದ ದಿನಗಳಿಂದಲೂ ಉತ್ತಮ ಸೌಲಭ್ಯಗಳು ಮತ್ತು ಉಪಕರಣಗಳನ್ನು ಪರಿಚಯಿಸಿದೆ.
ಈ ನಿಟ್ಟಿನಲ್ಲಿ ಇದೀಗ ನಾವು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಟೆಕ್ನಾಲಜಿ ಸೌಲಭ್ಯದ ಮಹತ್ವಪೂರ್ಣ ಕೊಡುಗೆ ನೀಡಿದ್ದೇವೆ. ಈ ಉತ್ಕೃಷ್ಟ ಸೌಲಭ್ಯಗಳನ್ನು ಜನರಿಗೆ ಸೇವೆಯ ರೂಪದಲ್ಲಿ ಕೈಗೆಟಕುವ ದರದಲ್ಲಿ ಒದಗಿಸುವುದೇ ನಮ್ಮ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿಯವರ ಉದ್ದೇಶವಾಗಿದೆ ಎಂದರು.
ಈ ತಂತ್ರಜ್ಞಾನದ ಮೂಲಕ ರೋಗಿಯ ಚಿಕಿತ್ಸೆಯನ್ನು ನಿಖರತೆಯೊಂದಿಗೆ ಕಾರ್ಯಗತಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ರೋಗಿಗಳಿಗಾಗಿ ಉತ್ತಮ ಶಸ್ತ್ರಚಿಕಿತ್ಸಾ ಫಲಿತಾಂಶಗಳು ಮತ್ತು ವೇಗವಾದ ಚೇತರಿಕೆಗೆ ದಾರಿ ನೀಡುತ್ತದೆ.
ಈ ವ್ಯವಸ್ಥೆ ಪ್ರಗತಿಶೀಲ 3ಡಿ ಚಿತ್ರಣ ಮತ್ತು ಸಮಯಕ್ಕೆ ತಕ್ಕ ನವೀಕರಣವನ್ನು ಬಳಸುತ್ತಿದ್ದು ಶಸ್ತ್ರಚಿಕಿತ್ಸಕರಿಗೆ ವೈಯಕ್ಷಿಕ ಶಸ್ತ್ರಚಿಕಿತ್ಸಾ ಯೋಜನೆಗಳನ್ನು ರಚಿಸಲು ಮತ್ತು ಅತೀ ದಕ್ಷವಾದ ಸ್ಥಿರತೆಯೊಂದಿಗೆ ಸಕ್ರಿಯ ಇಂಪ್ಲಾಂಟ್ ತಂತ್ರವನ್ನು ಸಾಧಿಸಲು ಅವಕಾಶ ನೀಡುತ್ತದೆ ಎಂದರು.
ಈ ಸಲಕರಣೆ ಮೊಣಕಾಲು, ಭಾಗಶಃ ಮೊಣಕಾಲು ಮತ್ತು ಸೊಂಟದ ಬದಲಿ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಏಕೈಕ ರೋಬೋಟ್ ಇದಾಗಿದೆ. ಈ ರೊಬೊಟಿಕ್ ಮೂಳೆಚಿಕಿತ್ಸೆಯು ಭವಿಷ್ಯವನ್ನು ಪ್ರತಿನಿಧಿಸುತ್ತದೆ, ಒಟ್ಟಿನಲ್ಲಿ ಈ ಸೌಲಭ್ಯದ ಸೇರ್ಪಡೆಯೊಂದಿಗೆ ಸಮಗ್ರ ರೊಬೊಟಿಕ್ ಶಸ್ತ್ರಚಿಕಿತ್ಸೆಯ ಸಾಮರ್ಥ್ಯಗಳನ್ನು ನೀಡುವ ಮೊದಲ ಆಸ್ಪತ್ರೆಯಾಗಿದೆ ಎಂದು ಡಾ.ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎ.ಜೆ. ಆಸ್ಪತ್ರೆ ವೈದ್ಯರಾದ ಡಾ.ಮಯೂರ್ ರೈ, ಡಾ.ಸುದೀಪ್ ರೈ ಉಪಸ್ಥಿತರಿದ್ದರು.
PublicNext
30/01/2025 03:29 pm