", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/222042-1738161738-Add-a-heading---2025-01-29T201207.564.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಕಂಪನಿಗೆ ಸೇರಿದ 7 ಕೋಟಿ ರೂಪಾಯಿಯನ್ನು ಆನ್‌ಲೈನ್ ಬೆಟ್ಟಿಂಗ್ ಆಡಿ ದುರ್ಬಳಕೆ ಮಾಡಿಕೊಂಡ ಆರೋಪದಡಿ ಓರ್ವನನ್ನು ಅಶೋಕನಗರ ಠಾಣೆ ಪೊಲ...Read more" } ", "keywords": "Bangalore, betting scam, employee arrested, fraud case, 7 crore rupees, corporate crime, white-collar crime, police investigation, financial fraud, embezzlement. ,Bangalore-Rural,Crime", "url": "https://publicnext.com/node" }
ಬೆಂಗಳೂರು: ಕಂಪನಿಗೆ ಸೇರಿದ 7 ಕೋಟಿ ರೂಪಾಯಿಯನ್ನು ಆನ್‌ಲೈನ್ ಬೆಟ್ಟಿಂಗ್ ಆಡಿ ದುರ್ಬಳಕೆ ಮಾಡಿಕೊಂಡ ಆರೋಪದಡಿ ಓರ್ವನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲ್ಯಾಂಗ್ ಪೋರ್ಡ್ ರಸ್ತೆಯಲ್ಲಿರುವ ಅರ್ನಸ್ಟ್ ಅಂಡ್ ಯಂಗ್ ಎಲ್ಎಲ್ ಪಿ ಕಂಪನಿಯ ಅಧಿಕಾರಿ ಶೌರಿ ರಾಜನ್ ಎಂಬುವರು ನೀಡಿದ ದೂರು ಆಧರಿಸಿ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಶ್ರೀಕಾಂತ್ ಎಂಬಾತನನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅರ್ನಸ್ಟ್ ಅಂಡ್ ಯಂಗ್ ಕಂಪೆನಿಯು ನಗರದ ವಿವಿಧ ಕಂಪೆನಿಗಳ ಹಣಕಾಸಿನ ವಹಿವಾಟಿನ ಸೇವೆ ನೀಡುತ್ತಿದೆ.
ಕಾಡುಬೀಸನಹಳ್ಳಿಯಲ್ಲಿರುವ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿಗೂ ಅಕೌಂಟಿಂಗ್ ಸರ್ವೀಸ್ ಒದಗಿಸುತ್ತಿದೆ. ಆರೋಪಿಯು 2023ರ ಆಗಸ್ಟ್ ನಿಂದ ಅಸೋಸಿಯೇಟ್ ಅಕೌಂಟಿಂಗ್ ಆಗಿ ಕೆಲಸ ಮಾಡುತ್ತಿದ್ದ. ಆಲ್ ಇಂಡಿಯಾ ಸ್ವಿಗ್ಗಿ ಕಂಪೆನಿಯ ವಿದ್ಯುತ್ ಬಿಲ್ ಪಾವತಿಸುವ ಜವಾಬ್ದಾರಿಯನ್ನು ಕಂಪನಿಯು ಶ್ರೀಕಾಂತ್‌ಗೆ ವಹಿಸಿತ್ತು. ಸ್ವಿಗ್ಗಿ ಕಂಪನಿಯು ಇದಕ್ಕಾಗಿ ಪ್ರತಿ ತಿಂಗಳು 1ರಿಂದ 2 ಕೋಟಿ ರೂಪಾಯಿವರೆಗೂ ಕಂಪನಿಗೆ ಪಾವತಿಸುತಿತ್ತು. ಈ ಹಣ ಬಳಸಿಕೊಂಡು ಬೆಟ್ಟಿಂಗ್ ಆ್ಯಪ್ ನಲ್ಲಿ ವಿನಿಯೋಗಿಸಿ ಕಂಪನಿಗೆ ನಂಬಿಕೆದ್ರೋಹ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ತಿಂಗಳಲ್ಲಿ ಸುಮಾರು 7 ಕೋಟಿ ವಂಚನೆ ಲೆಕ್ಕಪರಿಶೋಧನೆಯಲ್ಲಿ 7 ಕೋಟಿ ರೂಪಾಯಿ ವಂಚನೆಯಾಗಿರುವ ಬಗ್ಗೆ ಫುಡ್ ಡೆಲಿವರಿ ಕಂಪೆನಿ ಕಂಡುಕೊಂಡು ಪೇಮೆಂಟ್ ಜವಾಬ್ದಾರಿ ವಹಿಸಿಕೊಂಡಿದ್ದ ಕಂಪನಿಗೆ ಮಾಹಿತಿ ನೀಡಿತ್ತು. ಇದರಂತೆ ಪರಿಶೀಲಿಸಿದಾಗ ಕಳೆದ ಜೂನ್ ನಿಂದ ಡಿಸೆಂಬರ್ ವರೆಗೂ ಸುಮಾರು 7 ಕೋಟಿ ರೂಪಾಯಿ ಹಣವನ್ನ ಶ್ರೀಕಾಂತ್, ಬೆಟ್ಟಿಂಗ್ ಆ್ಯಪ್ ನಲ್ಲಿ ಹೂಡಿಕೆ ಮಾಡಿರುವುದು ಗೊತ್ತಾಗಿದೆ. ಹಣ ದುರುಪಯೋಗ ಬಗ್ಗೆ ಕಂಪನಿಯು ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಬಂಧಿಸಲಾಗಿದೆ. ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವಂಚನೆ ಸಂಬಂಧ ದೂರುದಾರರು ನೀಡಿದ ದೂರು ಆಧರಿಸಿ ಆರೋಪಿಯನ್ನ ಬಂಧಿಸಲಾಗಿದೆ. ಕಂಪನಿಗೆ ಸೇರಿದ ಸುಮಾರು 7 ಕೋಟಿ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದು, ಈ ಹಣವನ್ನ ಬೆಟ್ಟಿಂಗ್ ಆ್ಯಪ್ ನಲ್ಲಿ ಹೂಡಿಕೆ ಮಾಡಿದ್ದ. ಆರೋಪಿಯು 2023ರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವಿವಿಧ ಕಂಪನಿಗಳಿಗೆ ಲೆಕ್ಕಪರಿಶೋಧನೆ ಹಾಗೂ ಹಣದ ವಹಿವಾಟು ಸೇವೆ ಒದಗಿಸುತಿತ್ತು. ಫುಡ್ ಡೆಲಿವರಿ ಕಂಪನಿಗೆ ಪಾವತಿಸಿದ್ದ 7 ಕೋಟಿ ರೂಪಾಯಿ ದುರ್ಬಳಕೆ ಮಾಡಿ ಕಳೆದ ಆರು ತಿಂಗಳಿಂದ ಬೆಟ್ಟಿಂಗ್ ನಲ್ಲಿ ಆಡುತ್ತಿದ್ದ. ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಬೆಟ್ಟಿಂಗ್ ಕಂಪೆನಿಯು ವಂಚಿಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
PublicNext
29/01/2025 08:12 pm