", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/405356-1738161656-ias.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ರಾಜ್ಯದ ನಾಲ್ವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಆದ್ರೆ, ಅಧಿಕೃತವಾಗಿ ಯುಪಿ ಸರ್...Read more" } ", "keywords": "Kumbh Mela, Karnataka, Bangalore, Stampede, Accident, Krishna Bairegoud, Kumbh Mela Tragedy, Indian Festivals, Hindu Pilgrimage, Crowd Control Measures.,Bangalore,Bangalore-Rural,Politics,Government", "url": "https://publicnext.com/node" }
ಬೆಂಗಳೂರು: ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ರಾಜ್ಯದ ನಾಲ್ವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಆದ್ರೆ, ಅಧಿಕೃತವಾಗಿ ಯುಪಿ ಸರ್ಕಾರ ಇನ್ನೂ ಮಾಹಿತಿ ನೀಡಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಕುರಿತಂತೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಂಭಮೇಳಕ್ಕೆ ಕರ್ನಾಟಕದಿಂದ ತೆರಳಿದ್ದ ನಾಲ್ವರು ಕಾಲ್ತುಳಿತದಲ್ಲಿ ಮೃತಪಟ್ಟ ಮಾಹಿತಿ ಬಂದಿದೆ. ಆದ್ರೆ, ಉತ್ತರ ಪ್ರದೇಶ ಸರ್ಕಾರ ಮೃತರ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಈ ಕ್ಷಣದ ವರೆಗೆ ಯಾವ ಸಾವಿನ ಬಗ್ಗೆ ವರದಿ ನೀಡಿಲ್ಲ, ನಾವು ಯುಪಿ ಸರ್ಕಾರಕ್ಕೆ ಕೇಳುತ್ತಲೇ ಇದ್ದೇವೆ. ಆದರೆ, ಖಾಸಗಿ ವಲಯದಿಂದ ಮಾಹಿತಿ ಬಂದಿದೆ. ಬಳಿಕ ಬೆಳಗಾವಿಯಲ್ಲಿ ಡಿಸಿ ಜೊತೆಗೆ ಮಾತನಾಡಿ ಪರಿಶೀಲನೆ ಮಾಡಲು ತಿಳಿಸಿದ್ದೇವೆ.
ಡಿಸಿ ಬೆಳಗಾವಿಯಲ್ಲಿ ಕುಟುಂಬ ಸಂಪರ್ಕ ಮಾಡಿದಾಗ ನಾಲ್ಕು ಜನ ಮೃತರಾದ ಸಾಧ್ಯತೆ ಬಗ್ಗೆ ಮಾಹಿತಿ ಇದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಯುಪಿ ಸರ್ಕಾರದ ಮಾಹಿತಿ ಸಿಕ್ಕಿಲ್ಲ. ಈಗಾಗಲೇ ಬೆಳಗಾವಿಯಿಂದ ಓರ್ವ ಪೊಲೀಸ್ ಅಧಿಕಾರಿ, ಓರ್ವ ಎಡಿಸಿ ಹಾಗೂ ಬೆಂಗಳೂರಿನಿಂದ ಓರ್ವ ಐಎಎಸ್ ಅಧಿಕಾರಿ ತಂಡವನ್ನು ಯುಪಿಗೆ ಕಳಿಸಲಾಗಿದೆ. ಈ ಅಧಿಕಾರಿಗಳ ತಂಡ ಅಲ್ಲೇ ಮೊಕ್ಕಾಂ ಹೂಡಿ ಕ್ರಮ ಕೈಗೊಳ್ಳಲಿದೆ.
ಯುಪಿ ಸರ್ಕಾರ ತಕ್ಷಣ ನಿಖರವಾದ ಮಾಹಿತಿಯನ್ನು ಯಾಕೆ ಕೊಡ್ತಾ ಇಲ್ಲ ಎಂಬುದು ಗೊತ್ತಿಲ್ಲ. ಯಾವುದೇ ದುರಂತ ಆದಾಗ ಅಧಿಕೃತ ಮಾಹಿತಿ ಬರುತ್ತದೆ. ಆದರೆ, ಈ ಸಂದರ್ಭದಲ್ಲಿ ನಮಗೆ ಯಾವುದೇ ಪಟ್ಟಿ ಸಿಗುತ್ತಿಲ್ಲ. ಹಾಗಾಗಿ ಅಧಿಕೃತವಾಗಿ ಹೇಳಲು ಯಾವುದೂ ಸಾಧ್ಯವಿಲ್ಲ. ಯುಪಿ ಸರ್ಕಾರದ ಜೊತೆಗೆ ಸಂಪರ್ಕದಲ್ಲಿ ಇದ್ದೇವೆ. ಕರ್ನಾಟಕದಿಂದ ಒಟ್ಟು ಎಷ್ಟು ಜನ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ, ಯಾರಾದರೂ ಸಂಪರ್ಕಕ್ಕೆ ಸಿಗ್ತಿಲ್ಲ ಎಂದರೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ.
PublicNext
29/01/2025 08:11 pm