", "articleSection": "Others", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/283053_1738159519_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೋಲಾರ : ತಮಗಾಗಿ ಬದುಕಿದವರು ತಾವಾಗಿಯೇ ಉಳಿದು ಬಿಡುತ್ತಾರೆ ಇತರರಿಗಾಗಿ ಬದುಕಿದವರು ಇತಿಹಾಸದಲ್ಲಿ ಉಳಿದುಬಿಡುತ್ತಾರೆ ಎಂದು ಜಾನಪದ ಅಕಾಡೆಮಿ ಅ...Read more" } ", "keywords": "Node,Kolar,Others", "url": "https://publicnext.com/node" }
ಕೋಲಾರ : ತಮಗಾಗಿ ಬದುಕಿದವರು ತಾವಾಗಿಯೇ ಉಳಿದು ಬಿಡುತ್ತಾರೆ ಇತರರಿಗಾಗಿ ಬದುಕಿದವರು ಇತಿಹಾಸದಲ್ಲಿ ಉಳಿದುಬಿಡುತ್ತಾರೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷರು ಗೊಲ್ಲಹಳ್ಳಿ ಶಿವಕುಮಾರ್ ಹೇಳಿದರು.
ಇಂದು ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಸಹಯೋಗದಲ್ಲಿ 2024-25 ನೇ ಸಾಲಿನ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಓದು ಅಭಿಯಾನ ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಹಾನ್ ಚೇತನ ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು. ಜಗತ್ತಿನಲ್ಲಿ ಯಾರಿಗೂ ಇಲ್ಲದಂತಹ ವಿಗ್ರಹಗಳು ಅಂಬೇಡ್ಕರ್ ಅವರಿಗೆ ಇವೆ ಅಂದರೆ ನಾವು ಅರ್ಥ ಮಾಡಿಕೊಳ್ಳಬೇಕು. ಸಮಾನತೆಯ ಸಂಕೇತವೇ ಅಂಬೇಡ್ಕರ್ ಆಗಿದ್ದಾರೆ. ಅವರು ಪ್ರತಿಯೊಂದು ವಿಷಯದಲ್ಲಿ ಆಸಕ್ತಿ ಹೊಂದಿದ್ದರು ಮಹಿಳೆಯರ ಹಕ್ಕುಗಳಿಗಾಗಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರು. ಪ್ರತಿಯೊಬ್ಬ ಮಹಿಳೆ ಅಂಬೇಡ್ಕರ್ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದರು.
Kshetra Samachara
29/01/2025 07:35 pm