ಯಾದಗಿರಿ : ಸಿಎಂ ಸಿದ್ದರಾಮಯ್ಯ ಅವರು ಮೈಕ್ರೋ ಪೈನಾನ್ಸ್ ಗಳಿಗೆ ಎಚ್ಚರಿಕೆ ನೀಡಿದರು ಫೈನಾನ್ಸ್ ಅಧಿಕಾರಿಗಳು ಡೊಂಟ್ ಕೇರ್ ಎನ್ನುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಕುಟುಂಬಯೊಂದು ಮೈಕ್ರೊ ಪೈನಾನ್ಸ್ ಕಿರುಕುಳಕ್ಕೆ ಊರು ಬಿಟ್ಟು ಬೆಂಗಳೂರಿಗೆ ಹೋಗಿತ್ತು. ಗ್ರಾಮದ ಗೀತಮ್ಮ ನಾಲ್ಕೈದು ಫೈನಾನ್ಸ್ ನಲ್ಲಿ 30 ರಿಂದ 50 ಸಾವಿರದವರೆಗೆ ಸಾಲ ಪಡೆದಿದ್ದಳು.
ಇನ್ನೂ ಬೆಂಗಳೂರಲ್ಲೇ ತೀವ್ರ ಅನಾರೋಗ್ಯಕ್ಕೆ ತುತ್ತಾದ ಗೀತಮ್ಮನ ಮಗ ಮಲ್ಲಿಕಾರ್ಜುನ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಳು.
ಮಗ ಬದುಕಲ್ಲ ಊರಿಗೆ ಕರೆದ್ಯೊಯಿರಿ ಅಂತಾ ವೈದ್ಯರು ಹೇಳಿದ್ದಕ್ಕೆ ಮಗನೊಂದಿಗೆ ಊರಿಗೆ ಬಂದಿದ್ದರು.
ಗೀತಮ್ಮ ಊರಿಗೆ ಬರೋವಷ್ಟರಲ್ಲಿ ಫೈನಾನ್ಸ್ ನವರು ಮನೆಗೆ ಬೀಗ ಜಡಿದಿದ್ದರು. ಉಳಿದುಕೊಳ್ಳಲು ಜಾಗ ಇಲ್ಲದೇ ಮತ್ತೆ ಮಗನನ್ನ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಮಗ ಸತ್ತರೆ ನಾನು ಎಲ್ಲಿ ಹೋಗಲಿ ಅಂತಾ ತಾಯಿ ಕಣ್ಣೀರಾಕಿದ್ದಾರೆ.
ಒಂದು ವೇಳೆ ನನ್ನ ಮಗ ಸತ್ತರೆ ಹೆಣ ಬೇರೆಯವರ ಮನೆಯ ಮುಂದೆ ಇಡಲಾ..? ಅಥವಾ ಬೀದಿಯಲ್ಲಿ ಇಡಲಾ..? ನಮಗೆ ಸಹಾಯ ಮಾಡಿ ಪುಣ್ಯ ಕಟ್ಕೊಳ್ಳಿ ಎಂದು ಗೋಳಾಡಿದ್ದಾರೆ.
ಒಟ್ಟಾರೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಾಟಕ್ಕೆ ತಾಯಿ ಮಗ ಪರಿ ತಪ್ಪಿಸುವಂತಾಗಿದ್ದು, ಫೈನಾನ್ಸ್ ಗಳ ಅಟ್ಟಹಾಸ ಯಾವ ಹಂತಕ್ಕೆ ತಲುಪುತ್ತದೆ ಗೊತ್ತಿಲ್ಲ.
---
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
29/01/2025 04:45 pm