", "articleSection": "Education,Government", "image": { "@type": "ImageObject", "url": "https://prod.cdn.publicnext.com/s3fs-public/52563-1738141659-ee589aaf-2956-412a-83fe-6cdfb969388c.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MohanKrishnaShivamogga" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಸಂಸ್ಕೃತ ಒಂದು ಅಗಾದವಾದ ಸಮುದ್ರವಿದ್ದಂತೆ ಸಂಸ್ಕೃತದಲ್ಲಿ ಅಪಾರ ಜ್ಞಾನ ಭಂಡಾರವಿದೆ ಎಂದು ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ...Read more" } ", "keywords": "Sanskrit, language, ancient language, Indian culture, linguistic heritage, classical language, Sanskrit literature, Sanskrit news, language news, cultural news, Indian heritage, ancient India, linguisti,Shimoga,Education,Government", "url": "https://publicnext.com/node" }
ಶಿವಮೊಗ್ಗ : ಸಂಸ್ಕೃತ ಒಂದು ಅಗಾದವಾದ ಸಮುದ್ರವಿದ್ದಂತೆ ಸಂಸ್ಕೃತದಲ್ಲಿ ಅಪಾರ ಜ್ಞಾನ ಭಂಡಾರವಿದೆ ಎಂದು ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಕುವೆಂಪು ವಿ.ವಿ. ಇದರ ಅಧ್ಯಕ್ಷರಾದ ಡಾ.ಶೃತಕೀರ್ತಿ ತಿಳಿಸಿದರು.
ಅವರು ಇಂದು ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಪ್ರಥಮ ವರ್ಷದ ಎಮ್.ಏ.ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸ ಮಾತನಾಡುತ್ತ ಹೇಳಿದರು.
ಉದ್ದೇಶವಿದ್ದು ಉದ್ದೇಶವಿಲ್ಲದೆಯೋ ಸಂಸ್ಕೃತವನ್ನು ಆಯ್ದುಕೊಂಡಿದ್ದೀರಿ ಆದರೆ ಇದೊಂದು ಮಹಾ ಸಮುದ್ರದ ಪ್ರವೇಶದಂತೆ ಇದೆ, ಇಲ್ಲಿ ಬಂದು ನೀವು ದಡದಲ್ಲಿ ಸಿಗುವ ಮರಳನ್ನು ಕಪ್ಪೆ ಚಿಪ್ಪುಗಳನ್ನೂ ಆಯ್ದುಕೊಳ್ಳಬಹುದು ಅಥವಾ ಒಳಗೆ ಇಳಿದು ಮುತ್ತು ರತ್ನಗಳನ್ನೂ ಆಯ್ದುಕೊಳ್ಳಬಹುದು ಅಷ್ಟು ಅವಕಾಶ ನಿಮಗೆ ಸಂಸ್ಕೃತ ಸಾಹಿತ್ಯದಲ್ಲಿ ಲಭ್ಯವಿದೆ ನಿಮ್ಮ ಆಯ್ಕೆಯ ಮೇಲೆ ಇವೆಲ್ಲವೂ ನಿರ್ಧಾರವಾಗುತ್ತದೆ ಹಾಗಾಗಿ ಸಂಸ್ಕೃತವೆಂಬ ಈ ಅಗಾಧ ಸಮುದ್ರದಲ್ಲಿ ನೀವು ಮುತ್ತು ರತ್ನ ಗಳನ್ನು ಆಯ್ದುಕೊಳ್ಳುವಂತಹ ವಿದ್ಯಾರ್ಥಿಗಳಾಗಿ ಎಂದು ನೂತನ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಸ್ಕೃತವನ್ನು ಕಲಿಯುವುದರಿಂದ ಹಲವು ರೀತಿಯ ಉಪಯೋಗಗಳಿವೆ ಮೊಟ್ಟಮೊದಲಾಗಿ ಉಚ್ಚಾರಣೆಗೆ ಇದು ಅತ್ಯಂತ ಪ್ರಯೋಜನಕಾರಿ ಮತ್ತು ಎಲ್ಲ ಶಾಸ್ತ್ರಗಳು ಸಂಸ್ಕೃತದ ಮೂಲವೇ ಆಗಿರುವುದರಿಂದ ನೀವು ಸಂಸ್ಕೃತವನ್ನು ಒಂದನ್ನು ಕಲಿಯುವುದರಿಂದ ಉಳಿದ ಎಲ್ಲವನ್ನು ಕಲಿಯಲು ಸುಲಭವಾಗುತ್ತದೆ ಎಂದರು.
Kshetra Samachara
29/01/2025 02:37 pm