ಹೊಸಪೇಟೆ: ಜನಾರ್ದನ ರೆಡ್ಡಿ ವರ್ಸಸ್ ಶ್ರೀರಾಮುಲು ಮಧ್ಯೆ ನಡೆಯುತ್ತಿರೋ ಜಟಾಪಟಿ ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ಇದ್ರ ಮಧ್ಯೆ ಶ್ರೀರಾಮುಲು ವಿರುದ್ಧ ಜನಾರ್ದನ ರೆಡ್ಡಿ ಅವಹೇಳನಕಾರಿ ಪದ ಬಳಕೆ ಮಾಡಿ ಮಾತಾಡ್ತಿದ್ದಾರೆ ಅಂತ ಆರೋಪಿಸಿ ವಾಲ್ಮೀಕಿ ಸಮಾಜ ನೂರಾರು ಜನ ಮುಖಂಡರು ಹೊಸಪೇಟೆಯಲ್ಲಿ ಬೃಹತ್ ಬೈಕ್ ರ್‍ಯಾಲಿ ನಡೆಸಿದರು.
ಬೈಕ್ ರ್‍ಯಾಲಿಗೂ ಮುನ್ನ ನಗರದ ವಾಲ್ಮೀಕಿ ಸರ್ಕಲ್ ನಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಜನಾರ್ದನ ರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ರು. ಬಳಿಕ ವಾಲ್ಮೀಕಿ ಸರ್ಕಲ್‌ನಿಂದ ಎಸ್.ಪಿ ಕಚೇರಿವರೆಗೆ ವಾಲ್ಮೀಕಿ ಸಮಾಜದ ನೂರಾರು ಜನ ಬೈಕ್ ರ್ಯಾಲಿ ಮಾಡೋದ್ರು ಮೂಲಕ ಆಕ್ರೋಶ ಹೊರ ಹಾಕಿದ್ರು.
ಬೈಕ್ ರ್‍ಯಾಲಿ ಎಸ್.ಪಿ ಕಚೇರಿಗೆ ತಲುಪಿದ ಬಳಿಕ ಮಾತಾಡಿದ ವಾಲ್ಮೀಕಿ ಸಮಾಜದ ಮುಖಂಡ ಜಂಬಯ್ಯ ನಾಯಕ್, ಶ್ರೀರಾಮುಲು ವಾಲ್ಮೀಕಿ ಸಮಾಜದ ದೊಡ್ಡ ನಾಯಕರು. ಅವರ ಬಗ್ಗೆ ಜನಾರ್ದನ ರೆಡ್ಡಿ ಬಹಳ ಕೀಳಾಗಿ ಮಾತಾಡಿದ್ದಾರೆ. ಹೀಗಾಗಿ ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್, ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು ಅಂತ ಆಗ್ರಹಿಸಿದ್ರು. ವಾಲ್ಮೀಕಿ ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚುವ ವೇಳೆ ಸಣ್ಣಪುಟ್ಟ ಅವಘಡ ನಡೆದಿದೆ. ಇದ್ರಿಂದ ಒಂದಿಬ್ಬರು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯ ಆಗಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದು ಆರಾಮ್ ಆಗಿದ್ದಾರೆ ಎನ್ನಲಾಗಿದೆ.
PublicNext
28/01/2025 08:00 pm