ಅರಕಲಗೂಡು :ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಿ ಕಾರ್ಯ ವೈಖರಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ಮುಂದಾಗಿದ್ದರೂ ಸಾಲ ವಸೂಲಿಗಾರರ ಕಿರುಕುಳ ತಪ್ಪುತ್ತಿಲ್ಲ. ಅರಕಲಗೂಡು ತಾಲೂಕಿನ ಕಾಳೆನಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ಬಂದ ಸಿಬ್ಬಂದಿ ಹಣ ನೀಡುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಹೆಲ್ಮೆಟ್ ಧರಿಸಿ ಮುಂಬಾಗಿಲಿನಲ್ಲೇ ಕುಳಿತು ಕುಟುಂಬದವರರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಗ್ರಾಮಸ್ಥರಾದ ರವಿ-ಪ್ರಭ ದಂಪತಿ ಮೈಕ್ರೋಫೈನಾನ್ಸ್ ಸಂಸ್ಥೆಯಿಂದ ಐವತ್ತು ಸಾವಿರ ರೂಪಾಯಿ ಸಾಲ ಪಡೆದಿದ್ದು, ಹಣ ಮರುಪಾವತಿಸುವಂತೆ ಸಂಸ್ಥೆಯ ಸಿಬ್ಬಂದಿ ಮನೆಗೆ ಭೇಟಿ ನೀಡಿದ್ದರು.
ಬೆಳಿಗ್ಗೆ ಹೆಲ್ಮೆಟ್ ಹಾಕಿಕೊಂಡು ಮನೆಗೆ ಬಂದ ಸಿಬ್ಬಂದಿ, ಸಾಲದ ಹಣ ತಕ್ಷಣ ಮರುಪಾವತಿಸಲು ದಂಪತಿಗೆ ಒತ್ತಡ ಹಾಕಿದ್ದಾರೆ. “ನನ್ನ ಬಳಿ ಈಗ ಹಣ ಇಲ್ಲ” ಎಂದು ರವಿ ಸ್ಪಷ್ಟನೆ ನೀಡಿದರೂ, ಸಿಬ್ಬಂದಿ ಮನೆ ಬಿಟ್ಟು ಹೋಗದೆ, ಹಣ ಕಟ್ಟುವವರೆಗೆ ಇಲ್ಲಿಯೇ ಇರುತ್ತೇವೆ ಎಂದು ಬಾಗಿಲಿನಲ್ಲಿ ಕುಳಿತಿದ್ದಾರೆ. ಈ ಸಂದರ್ಭ ರವಿ ಮತ್ತು ಸಿಬ್ಬಂದಿಯ ನಡುವೆ ವಾಗ್ವಾದ ನಡೆದಿದ್ದು, ವಿಷಯ ಗ್ರಾಮಸ್ಥರ ಗಮನ ಸೆಳೆದಿದೆ. ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.
PublicNext
28/01/2025 05:11 pm