ತೇರದಾಳ: ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಭಾನುವಾರ ಬಿ.ರಾಮಪ್ಪ ಖವಟಕೊಪ್ಪ ಪತ್ತಿನ ಸಹಕಾರಿ ಸಂಘ ನಿ., ಹಳಿಂಗಳಿ ಇದರ ನೂತನ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಕುಲರತ್ನಭೂಷಣ ಮಹಾರಾಜರು ಚಾಲನೆ ನೀಡಿ, ಆಶೀರ್ವಚನ ನೀಡಿದರು.
ನೂತನ ಸಹಕಾರಿಗೆ ಸ್ಥಳೀಯ ಕಮರಿಮಠದ ಶಿವಾನಂದ ಸ್ವಾಮೀಜಿ ಪಾದಸ್ಪರ್ಶ ಮಾಡಿ, ಆಶೀರ್ವಾದ ನುಡಿಗಳನ್ನು ಹೇಳಿದರು. ಶಾಸಕ ಸಿದ್ದು ಸವದಿ, ಮುಖಂಡ ಸಿದ್ದು ಕೊಣ್ಣೂರ ಭೇಟಿ ನೀಡಿದರು. ಮುಖಂಡರಾದ ಮಾಧವರಾವ್ ಪಾಟೀಲ, ರಾಜು ನಂದೆಪ್ಪನವರ, ಬಸವರಾಜ ಕೊಕಟನೂರ, ಗ್ರಾಪಂ ಅಧ್ಯಕ್ಷ ಪ್ರದೀಪ ನಂದೆಪ್ಪನವರ, ಭರಮು ಉಳ್ಳಾಗಡ್ಡಿ, ಬಾಹುಬಲಿ ಚೌಗಲಾ, ಸಂಸ್ಥಾಪಕ ಅಧ್ಯಕ್ಷ ಸುರೇಶ ಕವಟಗೊಪ್ಪ ಸೇರಿದಂತೆ ಅನೇಕರಿದ್ದರು.
Kshetra Samachara
26/01/2025 04:53 pm