", "articleSection": "Cultural Activity,Government,Public Feed", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/271983_1737813873_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "9380627082" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೊಳಕಾಲ್ಮುರು:ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾರತ ಚುನಾವಣಾ ಆಯೋಗ ಹಾಗೂ ತಾಲ್ಲೂಕು ಆಡಳಿತ ಸಂಯುಕ್ತವಾಗಿ ರಾಷ್ಟ್ರೀಯ ಮತದಾರರ ದಿನಾಚರಣ...Read more" } ", "keywords": "Node,Chitradurga,Cultural-Activity,Government,Public-Feed", "url": "https://publicnext.com/node" }
ಮೊಳಕಾಲ್ಮುರು:ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾರತ ಚುನಾವಣಾ ಆಯೋಗ ಹಾಗೂ ತಾಲ್ಲೂಕು ಆಡಳಿತ ಸಂಯುಕ್ತವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಚಳ್ಳಕೆರೆ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸಮೀರ್ ಪಿ. ನಂದ್ಯಾಲ್ ಮಾತನಾಡಿ,ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕಾದ ಪವಿತ್ರ ಕರ್ತವ್ಯಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದು ಸಹ ಮುಖ್ಯವಾಗಿದೆ.
ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಉತ್ತಮ ಜನಪ್ರತಿನಿಧಿಗಳ ಅಗತ್ಯವಿದೆ. ಇಂತಹ ಜನವುತಿನಿಧಿಗಳ ಆಯ್ಕೆ ಮಾಡುವ ಹೊಣೆ ನಮ್ಮ ಮೇಲಿರುವ ಕಾರಣ ಉದಾಸೀನ ಮಾಡದೆ ಕಡ್ಡಾಯ ಮತದಾನ ಜತೆಗೆ ಅಮಿಷಗಳಿಗೆ ಬಲಿಯಾಗದೇ ಪ್ರಾಮಾಣಿಕತೆಯಿಂದ ಮತ ಹಾಕಬೇಕು. ಅರ್ಹರನ್ನು ಆಯ್ಕೆ ಮಾಡಿದಲ್ಲಿ ಸರ್ಕಾರದ ಸೌಲಭ್ಯಗಳು ಸರಿಯಾಗಿ ಮುಟ್ಟಲು ಸಾಧ್ಯವಾಗಲಿದೆ ಎಂದರು.
ವಕೀಲ ರಾಮಾಂಜಿನೇಯ ಅವರು ಮತದಾನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಗದೀಶ್,ಸರ್ಕಾರಿ ಅಭಿಯೋಜಕರಾದ ಕೆ. ಮಹಮದ್ ಶಂಶೀರ್ ಆಲಿ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಆರ್. ಆನಂದ್, ಪ್ರಾಂಶುಪಾಲ ಡಿ. ಗೋವಿಂದಪ್ಪ, ಪಿಎಸ್‌ಐ ಜಿ. ಪಾಂಡುರಂಗಪ್ಪ, ವಕೀಲರ ಸಂಘದ ವಿಜಯಲಕ್ಷ್ಮಿ. ವಿ.ಡಿ. ರಾಘವೇಂದ್ರ ಪಿ.ಜಿ. ವಸಂತಕುಮಾರ್. ಉಪನ್ಯಾಸಕ ಬಿ.ಎನ್. ತಿಪ್ಪೇಸ್ವಾಮಿ, ಶೀರಸ್ತೇದಾರ್ ಗೋಪಾಲ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರಂಗಪ್ಪ ಇದ್ದರು.
Kshetra Samachara
25/01/2025 07:34 pm