", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/28305320250125070950filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬಂಗಾರಪೇಟೆ - ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ವಿರುದ್ದ ಆರೋಪ ಸಬಿತಾಗಿದ್ದು ಇಬ್ಬರು ಆರೋಪಿಗಳಿಗೆ ಕೆಜಿಎಫ್ ಮೂರನೇ ಅಪರ ಜ...Read more" } ", "keywords": "Node,Kolar,Crime", "url": "https://publicnext.com/node" }
ಬಂಗಾರಪೇಟೆ - ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ವಿರುದ್ದ ಆರೋಪ ಸಬಿತಾಗಿದ್ದು ಇಬ್ಬರು ಆರೋಪಿಗಳಿಗೆ ಕೆಜಿಎಫ್ ಮೂರನೇ ಅಪರ ಜಿಲ್ಲಾ ಮತ್ತು ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 2022 ಅಕ್ಟೋಬರ್ 13ರಂದು ಬಂಗಾರಪೇಟೆ ಪಟ್ಟಣದ ಶಾಂತಿನಗರದ ವಾಸಿ ಗೀತ 74 ವರ್ಷ ಎಂಬುವವರನ್ನು ಕೊಲೆ ಮಾಡಿ ಅವರ ಬಳಿ ಇದ್ದ ಒಂದು ಚಿನ್ನದ ಚೈನ್ ಮತ್ತು ೪ ಬಂಗಾರದ ಬಳೆಗಳನ್ನು ದೋಚಿಕೊಂಡು ಹೋಗಿದ್ದ ಆರೋಪಿಗಳಾದ ಆನಂದ್ ಸಿಂಧೆ ಮತ್ತು ಶಾಂತಭಾಯಿ ವಿರುದ್ದ ಅಂದಿನ ಬಂಗಾರಪೇಟೆ ಪೇಟೆ ಪೋಲೀಸ್ ಠಾಣೆಯ ಸಿಐ ಟಿ.ಸಂಜೀವರಾಯಪ್ಪ ಪ್ರಕರಣ ದಾಖಲಿಸಿ ತನಿಖೆ ನಡೆಸಿ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ವಿರುದ್ದ ಆರೋಪ ಸಾಬಿತಾದ ಕಾರಣ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಎರಡು ಸಾವಿರ ದಂಡ ವಿಧಿಸಿ ಕೆಜಿಎಫ್ ಪೀಠದ 3ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾನುಸಾದ್ ನಾಯಕ್ ವಾದ ಮಂಡಿಸಿದರು.
Kshetra Samachara
25/01/2025 07:10 pm