ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಫೆಬ್ರವರಿ 27 ಹಾಗೂ 28 ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ‘ಕೊಡವ ಬಲ್ಯನಮ್ಮೆ’ಯನ್ನು ಆಯೋಜಿಸಲು ಸರ್ವ ಸದಸ್ಯರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಅಮ್ಮತ್ತಿ ಕೊಡವ ಸಮಾಜದ ಸಹಭಾಗಿತ್ವದಲ್ಲಿ ಅದ್ಧೂರಿಯ ಕೊಡವ ಬಲ್ಯ ನಮ್ಮೆಯನ್ನು ನಡೆಸಲು ಒಕ್ಕೊರಲಿನ ನಿರ್ಧರಿಸಲಾಯಿತು.
ಕೊಡವ ಬಲ್ಯ ನಮ್ಮೆಯ ಮೊದಲ ದಿನ ಸಾರ್ವತ್ರಿಕವಾಗಿ ಕೊಡವ ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿದ್ದು, ಈ ಪ್ರಯುಕ್ತ ಉಮ್ಮತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಕಪ್ಪೆಯಾಟ್, ದುಡಿಕೊಟ್ಟ್ ಪಾಟ್ (ದೇಶಕೆಟ್ಟ್ ಪಾಟ್ ಅಥವಾ ಕಾವೇರಿ ಪಾಟ್), ಪರೆಯಕಳಿ, ಸಮ್ಮಂಧ ಅಡ್ಕುವ, ವಾಲಗ ನುಡಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು. ಅಂತೆಯೇ ಸಾಹಿತ್ಯ ಪರ ಸ್ಪರ್ಧೆಗಳಾದ ಕವನ ಸ್ಪರ್ಧೆ, ಕೊಡವ ಪಾಟ್ ಸ್ಪರ್ಧೆ, ಕೊಡವ ಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು ಎಂದು ಅಧ್ಯಕ್ಷರು ವಿವರಿಸಿದರು ,ಕೊಡವ ವಸ್ತು ಪ್ರದರ್ಶನ ಹಾಗೂ ಪೈಪೋಟಿಗೆ ಅವಕಾಶವನ್ನು ಬಲ್ಯನಮ್ಮೆಯಲ್ಲಿ ಕಲ್ಪಿಸಲಾಗಿದೆ. ವಸ್ತು ಪ್ರದರ್ಶನ ನೀಡುವವರು ತಮ್ಮ ತಮ್ಮಲ್ಲಿರುವ ಪ್ರಾಚ್ಯ ಕೊಡವ ಬಳಕೆಯ ವಸ್ತುಗಳನ್ನು ಬಲ್ಯ ನಮ್ಮೆಯ ವೇಳೆ ಪ್ರದರ್ಶನಕ್ಕಿಡಲು ಅವಕಾಶವಿದ್ದು ಬಹುಮಾನ ನೀಡಲಾಗುವುದು ಎಂದರು.
Kshetra Samachara
24/01/2025 06:33 pm