ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ - ಅವಧಿಗೂ ಮುನ್ನವೇ ಹೆರಿಗೆಗೆ ಮುಂದಾದ ಭಾರತೀಯರು

ನ್ಯೂಯಾರ್ಕ್: ಅಮೆರಿಕದಲ್ಲಿ ಪೌರತ್ವ ಪಡೆಯುವುದು ಕಷ್ಟದ ಕೆಲಸ. ಅಲ್ಲಿ ಪೌರತ್ವ ನಿಯಮಗಳು ಜಟಿಲವಾಗಿದೆ. ಪೋಷಕರು ಮೂಲ ಅಮೆರಿಕದವರಲ್ಲದದ್ದರೂ ಅಲ್ಲಿಯೇ ಜನಿಸುವ ಮಗು ಅಲ್ಲಿನ ಪೌರತ್ವ ಪಡೆಯುತ್ತಿತ್ತು. ಈ ನಡುವೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಾಯ್ದೆಯನ್ನೇ ರದ್ದುಗೊಳಿಸಲು ಮುಂದಾಗಿದ್ದಾರೆ. ಮುಖ್ಯವಾಗಿ 127 ವರ್ಷದ ಹಳೆಯ ಸಂವಿಧಾನವನ್ನು ತಿದ್ದುಪಡಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಭಾರತೀಯ ಮೂಲದ ಪೋಷಕರಲ್ಲಿ ತಳಮಳ ಶುರುವಾಗಿದೆ.

ಆದರೆ ಹುಟ್ಟಿನಿಂದ ನಾಗರಿಕತೆ ಪಡೆಯುವ ಹಕ್ಕು ಅಮೆರಿಕದ ಸಂವಿಧಾನದಲ್ಲಿಯೇ ಇರುವ ಕಾರಣ ಆದೇಶ ಜಾರಿಯಾಗುವುದು ಅನುಮಾನವಾಗಿದೆ. ಟ್ರಂಪ್ ನೀಡಿರುವ ಆದೇಶಕ್ಕೆ ತಡೆ ನೀಡಬೇಕು ಎಂದು 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಮೆಕ್ಸಿಕೋ ಗಡಿಯಲ್ಲಿ ನಿರ್ಬಂಧವನ್ನು ವಿಧಿಸಿದರು. ಅಮೆರಿಕ ತಾತ್ಕಾಲಿಕವಾಗಿ ದೇಶದಲ್ಲಿ ನೆಲೆಸಲು ಅನುಮತಿ ನೀಡುವ ತಾತ್ಕಾಲಿಕ ಹೆಚ್‌1ಬಿ, ಎಲ್‌1 ವೀಸಾ, ಗ್ರೀನ್ ಕಾರ್ಡ್, ತಾತ್ಕಾಲಿಕ ವೀಸಾ, ವಿದ್ಯಾರ್ಥಿ ವೀಸಾ, ಪ್ರವಾಸಿ ವೀಸಾ, ದಾಖಲೆ ಹೊಂದಿಲ್ಲದೇ ವಾಸಿಸುತ್ತಿರುವ ಭಾರತೀಯರ ಮೇಲೆ ಹೊಸ ಕಾನೂನು ಪರಿಣಾಮ ಬೀರುತ್ತದೆ.

ಹುಟ್ಟಿನಿಂದ ಸಿಗುವ ಪೌರತ್ವ ಹಕ್ಕು ನೀತಿಯನ್ನು ಅಂತ್ಯಗೊಳಿಸುವ ಕಾನೂನಿಗೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಫೆಬ್ರವರಿ 20ರಿಂದ ಜಾರಿಗೆ ಬರಲಿದೆ. ಫೆಬ್ರವರಿ 20 ರ ಬಳಿಕ ಜನಿಸುವ ವಲಸಿಗರ ಮಕ್ಕಳಿಗೆ ಅಮೆರಿಕದ ಪೌರತ್ವ ಪಡೆಯುವುದು ಕಠಿಣವಾಗಲಿದೆ. ಇದರಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅವಧಿಗೆ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

Edited By : Nagaraj Tulugeri
PublicNext

PublicNext

24/01/2025 05:45 pm

Cinque Terre

13.62 K

Cinque Terre

0