ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಕಾಫಿ ತೋಟದ ಬಳಿ ಪ್ರತ್ಯಕ್ಷಗೊಂಡ ದೈತ್ಯಾಕಾರದ ಕಾಡಾನೆ

ಬೇಲೂರು: ತಾಲೂಕಿನ ಕೋಡಿಗನಹಳ್ಳಿ ಗ್ರಾಮದ ಬಳಿ ದೈತ್ಯ ಕಾಡಾನೆಯೊಂದು ಬೀಡುಬಿಟ್ಟಿದ್ದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಗ್ರಾಮದ ಸಮೀಪವೇ ಒಂಟಿ ಸಲಗ ಕಾಣಿಸಿಕೊಳ್ಳುತ್ತಿದ್ದು, ಹಳ್ಳಿಗಳ ಅಕ್ಕಪಕ್ಕದ ಕಾಫಿ ತೋಟಗಳಲ್ಲಿ ಸಂಚರಿಸುತ್ತಿದೆ.

ದೈತ್ಯಾಕಾರದ ಕಾಡಾನೆ ಕಾಫಿ ತೋಟದ ಹೊಂಡದಲ್ಲಿ ನೀರು ಕುಡಿಯುತ್ತಾ ನಿಂತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಇನ್ನು ಆನೆಗಳ ಚಲನವಲನದ ಬಗ್ಗೆ ನಿಗಾ ಇಟ್ಟಿರುವ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ, ಒಂಟಿ ಸಲಗದ ಬಗ್ಗೆ ಮೈಕ್ ಮೂಲಕ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ.

Edited By : Suman K
PublicNext

PublicNext

23/01/2025 01:50 pm

Cinque Terre

42.37 K

Cinque Terre

0

ಸಂಬಂಧಿತ ಸುದ್ದಿ