", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/416809_1738663731_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SantoshHassan" }, "editor": { "@type": "Person", "name": "8749017705" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹಾಸನ: ಬಡಾವಣೆ ಠಾಣೆಯ ಪೊಲೀಸರ ಸಮ್ಮುಖದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ನಗರದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ದನಕರ...Read more" } ", "keywords": "Node,Hassan,News", "url": "https://publicnext.com/node" } ಹಾಸನ: ಬಡಾವಣೆ ಪೊಲೀಸರ ಭರ್ಜರಿ ಬೇಟೆ - ಕಸಾಯಿಖಾನೆಗೆ ಸಾಗಿಸುತ್ತಿದ್ದ ದನಕರುಗಳ ರಕ್ಷಣೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಬಡಾವಣೆ ಪೊಲೀಸರ ಭರ್ಜರಿ ಬೇಟೆ - ಕಸಾಯಿಖಾನೆಗೆ ಸಾಗಿಸುತ್ತಿದ್ದ ದನಕರುಗಳ ರಕ್ಷಣೆ

ಹಾಸನ: ಬಡಾವಣೆ ಠಾಣೆಯ ಪೊಲೀಸರ ಸಮ್ಮುಖದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ನಗರದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ದನಕರುಗಳನ್ನು ರಕ್ಷಣೆ ಮಾಡಲಾಗಿದೆ.

ಎರಡು ಅಶೋಕ್ ಲೈಲೆಂಡ್ ಪಿಕಪ್ ವಾಹನಗಳಲ್ಲಿ ಸಾಗಿಸುತ್ತಿದ್ದ ಸುಮಾರು 15ಕ್ಕೂ ಹೆಚ್ಚು ದನಕರುಗಳನ್ನು ನಗರದ ಡೈರಿ ವೃತ್ತ ಸೇರಿದಂತೆ ವಿವಿಧೆಡೆ ಖಾಸಾಯಿ ಖಾನೆಗೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಧಾಳಿ ಮಾಡಿ, ವಾಹನಗಳು ಹಾಗೂ ಗೋವುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ನ ನಗರ ಕಾರ್ಯದರ್ಶಿ ಶಶಿ ಈ ಬಗ್ಗೆ ಮಾತನಾಡಿ, ಹಾಸನದಲ್ಲಿ ದನಕರುಗಳ ಕಳ್ಳತನ ಮಾಡಿ ಮಾರಾಟದ ಹೆಸರಿನಲ್ಲಿ ಅವುಗಳನ್ನು ಕಸಾಯಿಖಾನೆಗೆ ರವಾನೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅವರ ಸಮ್ಮುಖದಲ್ಲೇ ಇಂದು ನಗರದ ವಿವಿಧೆಡೆ ವಾಹನಗಳ ಸಮೇತ ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದರು.

ಈಗಾಗಲೇ ಎರಡು ವಾಹನಗಳನ್ನು ತಡೆದು ಪರಿಶೀಲಿಸಿದಾಗ ಅವುಗಳನ್ನು ಕಸಾಯಿಖಾನೆಗೆ ರವಾನೆ ಮಾಡುತ್ತಿರುವುದು ಕಂಡು ಬಂದಿದೆ, ಒಂದು ವಾಹನದಲ್ಲಿ ಸಣ್ಣ - ಸಣ್ಣ ಕರುಗಳು ಹಾಗೂ ಮತ್ತೂಂದು ವಾಹನದಲ್ಲಿ ಗೂಳಿಗಳನ್ನು ಸಾಗಿಸಲಾಗುತ್ತಿತ್ತು, ಈ ಬಗ್ಗೆ ವಿಚಾರಿಸಿದಾಗ ಹಾಸನದಿಂದ ಬೆಂಗಳೂರಿನ ಖಾಸಾಯಿಖಾನೆಗೆ ರವಾನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದರು.

ಗೊ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿ ಇದ್ದರೂ ಹಾಸನ ಸೇರಿದಂತೆ ವಿವಿಧೆಡೆ ಗೋ ಮಾಂಸ ಮಾರಾಟ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ, ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಗೋವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ವೇಳೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/02/2025 03:38 pm

Cinque Terre

200

Cinque Terre

0

ಸಂಬಂಧಿತ ಸುದ್ದಿ