ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ‘ಸ್ಕೀಂ’ ಮೂಲಕ ನೀಡುವುದಾಗಿ ಮುಂಗಡ ಹಣ ಸಂಗ್ರಹಿಸಿ ನಾಪತ್ತೆಯಾಗಿದ್ದ ಮಹೀ ಟ್ರೇರ್ಸ್ನ ಮಾಲೀಕರೋರ್ವರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಸೋಮವಾರಪೇಟೆ ಪೊಲೀಸರು ತಮಿಳುನಾಡು ರಾಜ್ಯದ ಪುದುಕೋಟೈ ಜಿಲ್ಲೆಯ ಬಾಬು ಕೇಶವನ್ ಅವರನ್ನು ವಶಕ್ಕೆ ಪಡೆದು ಸೋಮವಾರಪೇಟೆ ಠಾಣೆಗೆ ರಾತ್ರಿ ಕರೆತಂದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಡಿ.31ರಿಂದ ಅಂಗಡಿ ಬಾಗಿಲು ತೆಗೆಯದೇ ಮುಂಗಡ ಹಣದೊಂದಿಗೆ ನಾಪತ್ತೆಯಾಗಿದ್ದ ಮಹೀ ಟ್ರೇರ್ಸ್ನ ಬಾಬು ಕೇಶವನ್, ಮಹೇಶ್ ಸೇರಿದಂತೆ ಇತರ ಮೂವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಬಾಬು ಕೇಶವನ್ ಅವರಿಗೆ ಸೇರಿದ 2 ಮೊಬೈಲ್, ಮಹೇಶ್ಗೆ ಸೇರಿದ 1 ಮೊಬೈಲ್ ಅಂದಿನಿಂದ ಇಂದಿನವರೆಗೂ ಸ್ವಿಚ್ ಆಫ್ ಆಗಿದ್ದು, ಇವರುಗಳ ಪತ್ತೆಗೆ ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದರು. ಸೋಮವಾರಪೇಟೆ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ತಮಿಳುನಾಡು ರಾಜ್ಯಕ್ಕೆ ತೆರಳಿ, ಅಂತಿಮವಾಗಿ ಬಾಬು ಕೇಶವನ್ ಅವರನ್ನು ಪತ್ತೆಹಚ್ಚಿ ಸೋಮವಾರಪೇಟೆಗೆ ಕರೆತಂದಿದ್ದಾರೆ. ವಿಚಾರ ತಿಳಿಯುತಿದಂತೆ ಹಳೆ ಕಳೆದುಕೊಂಡವರು ಠಾಣೆಯ ಮುಂದೆ ಜಮಾಯಿಸಿದ್ರು.
Kshetra Samachara
23/01/2025 08:14 am