", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1737558615-WhatsApp-Image-2025-01-22-at-8.13.38-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RohitMadakeri" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಶಾಲನಗರ: ಹೆತ್ತು ಹೊತ್ತು ಸಾಕಿದ ಮಕ್ಕಳನ್ನು ಬಿಟ್ಟು ಗಂಡ ಹೆಂಡತಿಯರು ಮನೆಯನ್ನೇ ಬಿಟ್ಟಿದ್ದಾರೆ. ಅದೆಷ್ಟೋ ಮನೆಗಳಲ್ಲಿ, ಗಂಡ ಇದ್ದರೆ ಹೆಂಡ...Read more" } ", "keywords": "Kodagu, Microfinance Menace, Debt Trap, Karnataka Rural News, Microfinance Harassment, Farmer Suicides, Rural Finance Issues, Karnataka Government Policies, Indian Microfinance Sector, Rural Distress.,Crime,Law-and-Order", "url": "https://publicnext.com/node" } ಕೊಡಗು : ಜೀವ ಹಿಂಡುತ್ತಿದೆ ಮೈಕ್ರೋ ಫೈನಾನ್ಸ್ ಭೂತ, ಊರು ಬಿಟ್ಟ ಗ್ರಾಮದ ಜನತೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ಜೀವ ಹಿಂಡುತ್ತಿದೆ ಮೈಕ್ರೋ ಫೈನಾನ್ಸ್ ಭೂತ, ಊರು ಬಿಟ್ಟ ಗ್ರಾಮದ ಜನತೆ

ಕುಶಾಲನಗರ: ಹೆತ್ತು ಹೊತ್ತು ಸಾಕಿದ ಮಕ್ಕಳನ್ನು ಬಿಟ್ಟು ಗಂಡ ಹೆಂಡತಿಯರು ಮನೆಯನ್ನೇ ಬಿಟ್ಟಿದ್ದಾರೆ. ಅದೆಷ್ಟೋ ಮನೆಗಳಲ್ಲಿ, ಗಂಡ ಇದ್ದರೆ ಹೆಂಡತಿ ಇಲ್ಲ ಹೆಂಡತಿ ಇದ್ದರೆ ಗಂಡ ಇಲ್ಲದೆ ಕಣ್ಣೀರಿಡುತ್ತಿದ್ದಾರೆ. ಇದು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಕಂಡು ಬರುತ್ತಿರೋ ಚಿತ್ರಣ.

ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಬೇಸತ್ತು ಸಾಲಗಾರರು ಗ್ರಾಮವನ್ನೇ ತೊರೆಯುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿ ಹೆಚ್ಚಾಗಿದೆ. ನಾಯಿ ಕೊಡೆಗಳಂತೆ ತಲೆಯೆತ್ತಿರುವ ಸಂಸ್ಥೆಗಳು ಗ್ರಾಮೀಣ ಭಾಗದ ಹಳ್ಳಿಗಳಿಗೆ ವಿಸ್ತರಿಸಿದೆ. ಜನರ ಕಷ್ಟವನ್ನೇ ಬಂಡವಾಳ ಮಾಡಿಕೊಂಡು ಬಡ್ಡಿಗೆ ಸಾಲ ಕೊಡುವ ಸಂಸ್ಥೆಗಳು ನಂತರ ಸಾಲ ಮರುಪಾವತಿಗೆ ನೀಡುತ್ತಿರುವ ಕಿರುಕುಳಕ್ಕೆ ಜನ ಬೇಸತ್ತು ಊರು ಬಿಡುತ್ತಿದ್ದಾರೆ.

ಗ್ರಾಮೀಣ ಭಾಗದ ಹಳ್ಳಿಗಳು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಬಡ ಕೂಲಿ ಕಾರ್ಮಿಕರನ್ನೇ ಗುರಿಯಾಗಿಟ್ಟುಕೊಂಡು ಈ ಸಂಸ್ಥೆಗಳು ಸಾಲ ಕೊಡುತ್ತಿವೆ. ಕನಿಷ್ಠ ಇಪ್ಪತೈದು ಸಾವಿರದಿಂದ ಲಕ್ಷದವರೆಗೆ ಸಾಲ ಕೊಡುವ ಸಂಸ್ಥೆಗಳು ಸಕಾಲದಲ್ಲಿ ಸಾಲ ಮರು ಪಾವತಿಸುವಲ್ಲಿ ವಿಫಲರಾಗುವವರ ವಿರುದ್ಧ ಕಿರುಕುಳ ನೀಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಜಿಲ್ಲಾ ಕೇಂದ್ರದಲ್ಲಿ ಸಂತ್ರಸ್ತರು ಪ್ರತಿಭಟನೆ ಕೂಡ ನಡೆಸಲು ತೀರ್ಮಾನಿಸಲಾಗಿದೆ.

ಆಧಾರ್ ಕಾರ್ಡ್ ಕೊಟ್ಟರೆ ಸಾಕು ಗರಿಷ್ಟ ಒಂದು ಲಕ್ಷದವರೆಗೆ ಸಾಲ ಕೊಡುತ್ತೇವೆ ಎಂಬ ಕೆಲವು ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದ ಬೇಸತ್ತು ಊರು ಬಿಡುತ್ತಿದ್ದಾರೆ. ಇದು ಕೊಡಗು ಜಿಲ್ಲೆಯ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನು ಕೊಲ್ಲಿ ಹಾಡಿ, ದಾಸವಾಳ ಪೈಸಾರಿ ಬೆಳ್ಳಿ ಕಾಲೋನಿ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಮದಲಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲೂ ಈ ಸಮಸ್ಯೆ ಹಲವು ತಿಂಗಳುಗಳಿಂದಲೂ ಉದ್ಭವವಾಗಿದೆ. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿಎಲ್ ವಿಶ್ವ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರು ಗ್ರಾಮಸ್ಥರು ಒಟ್ಟು ಸೇರಿ ಕುಶಾಲನಗರ ತಾಲೂಕು ದಂಡಾಧಿಕಾರಿಯವರಿಗೆ ಮೈಕ್ರೊ ಫೈನಾನ್ಸ್ ಗಳ ವಿರುದ್ಧ ಕ್ರಮಕ್ಕೆ ಮನವಿ ಸಲ್ಲಿಸಲಾಯಿತು.

Edited By : Shivu K
PublicNext

PublicNext

22/01/2025 08:43 pm

Cinque Terre

65.92 K

Cinque Terre

0

ಸಂಬಂಧಿತ ಸುದ್ದಿ