ಕಾರವಾರ : ನೌಕಾನೆಲೆಯ ಸಿಬ್ಬಂದಿಯು ಜನಸಾಮಾನ್ಯರ ಮೇಲೆ ಹಲ್ಲೆ ಮಾಡಿರುವ ಪ್ರಕರಣವನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಹಗುರವಾಗಿ ಪರಿಗಣಿಸಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.
ನಗರದಲ್ಲಿ ಮಾರನಾಡಿದ ಅವರು, ದೇಶದ ರಕ್ಷಣೆಗಾಗಿ ಕಾರವಾರ-ಅಂಕೋಲಾ ಕ್ಷೇತ್ರದ ಜನರು ತಮ್ಮ ಭೂಮಿ ತ್ಯಾಗ ಮಾಡಿದ್ದಾರೆ. ಆದರೆ ಭೂಮಿಕೊಟ್ಟ ಸ್ಥಳೀಯರು ಹಾಗೂ ಮೀನುಗಾರರಿಗೆ ನೌಕಾನೆಲೆಯಿಂದ ದೌರ್ಜನ್ಯವಾಗುತ್ತಿದೆ. ಅನ್ಯಭಾಷೆಯೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದೇಶ ಕಾಯುವ ಹೆಸರಿನಲ್ಲಿ ಹಿಂಸೆ ನೀಡುತ್ತಿದ್ದಾರೆ. ಇದು ಖಂಡನೀಯ ಎಂದರು.
ದೇಶದ ರಕ್ಷಣೆಗೆ ಸ್ಥಳೀಯರ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಿಟ್ಟು ಈ ರೀತಿಯ ಹಲ್ಲೆ ಮಾಡುವುದು ಸರಿಯಲ್ಲ. ಹೀಗಾಗಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕೇವಲಸಭೆನಡೆಸದೇ ನೌಕಾನೆಲೆ ಅಧಿಕಾರಿಗಳಿಂದ ಎಚ್ಚರಿಕೆಯ ಒಪ್ಪಂದಮಾಡಿ ಕೊಳ್ಳಬೇಕು. ಅಲ್ಲಿಯ ವರೆಗೆ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದರು.
Kshetra Samachara
20/01/2025 05:08 pm