ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಇಬ್ಬನಿ ಚಳಿಗೆ ಬೆಂಡಾದ ಹೊಸದುರ್ಗ ಜನತೆ

ಹೊಸದುರ್ಗ: ಪಟ್ಟಣದ ಮುಖ್ಯ ರಸ್ತೆಗಳೆಲ್ಲವೂ ಇಬ್ಬನಿಯಿಂದ ಆವರಿಸಿಕೊಂಡಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.

ಸರಿ ಸುಮಾರು 8 ರಿಂದಾ 8:30 ವರೆಗೆ ಸಮಯವಾದರೂ ಕೂಡ ಇಬ್ಬನಿ ಬಿದ್ದಿದ್ದರಿಂದಾ ಮುಂಜಾನೆ ವಾಕಿಂಗ್,ಜಾಗಿಂಗ್, ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳು. ಬೆಳಿಗ್ಗೆ ಕೆಲಸಕ್ಕೆ ತೆಳುವ ಸಾರ್ವಜನಿಕರಿಗೆ ರಸ್ತೆ ಕಾಣದಂತೆ ಇಬ್ಬನಿ ಆವರಿಸಿ ಸಂಚಾರಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಇಬ್ಬನಿಯಿಂದ ತಡೆಯಲಾರದಷ್ಟು ಚಳಿ ಇದ್ದು ಇದರಿಂದ ಶಾಲಾ ಮಕ್ಕಳು ವೃದ್ಧರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾದ್ಯತೆಗಳು ಹೆಚ್ಚಾಗುತ್ತಿವೆ. ರಸ್ತೆಯಲ್ಲಿ ಸಂಚರಿಸುವ ಬಸ್ ಗಳು ಕಾಣದಂತೆ ಇಬ್ಬನಿ ಆವರಿಸಿದ್ದು ಧನುರ್ಮಾಸ ಮುಗಿದರು ಚಳಿಗಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.

Edited By : PublicNext Desk
Kshetra Samachara

Kshetra Samachara

20/01/2025 09:09 am

Cinque Terre

3.24 K

Cinque Terre

0

ಸಂಬಂಧಿತ ಸುದ್ದಿ