ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯೂರು : ನೀರಿಗಾಗಿ ಜ.21 ರಂದು ಹಿರಿಯೂರು ಬಂದ್

ಹಿರಿಯೂರು : ತಾಲೂಕಿನ ಜವನಗುಂಡನಹಳ್ಳಿ ಗಾಯಿತ್ರಿ ಜಲಾಶಯ ಹಾಗೂ ಕಲ್ಲವಲ್ಲಿ ಭಾಗದ 6 ಕೆರೆಗಳಿಗೆ ವಾಣಿವಿಲಾಸ ಸಾಗರ ಜಲಾಶದಿಂದ ನೀರು ತುಂಬಿಸುವಂತೆ ಒತ್ತಾಯಿಸಿ ಅನೇಕ ಚಳುವಳಿಗಳನ್ನು ಹಾಗೂ ಹೋರಾಟಗಳನ್ನು ಮಾಡಿಕೊಂಡು ಬಂದರೂ ,ಈ ವಿಚಾರವಾಗಿ ಸರ್ಕಾರ ಅಥವಾ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಇರುವುದು ಖಂಡಿಸಿ ರೈತ ಸಂಘದ ವತಿಯಿಂದ ಜನವರಿ 21 ರಂದು ಹಿರಿಯೂರು ಬಂದ್ ಮಾಡಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷರಾದ ಕೆ ಟಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿ. ಜನವರಿ 21ನೇ ತಾರೀಖು ಹಿರಿಯೂರು ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಈ ಬಂಧಗೆ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಸಂಘ ಸಂಸ್ಥೆಗಳು ಸಹ ಈ ಬಂದ್ ಗೆ ಬೆಂಬಲ ನೀಡಬೇಕು.

ಬೆಳಗ್ಗೆ 9 ಗಂಟೆಗೆ ಗಾಂಧಿ ವೃತ್ತದಿಂದ ಕಣಿವೆ ಮಾರಮ್ಮನ ದೇವಸ್ಥಾನ ಎಲ್ಲರೂ ಒಟ್ಟಾಗಿ ಸೇರಿ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಜಾಥ ನಡೆಸಿ ನಂತರ ಕಣಿಮೆ ಮಾರಮ್ಮನ ದೇವಸ್ಥಾನದ ಹತ್ತಿರ ಸಮಾವೇಶಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸುತ್ತೇವೆ .ಈ ಬಂದ್ ನಲ್ಲಿ ಯಾವುದೇ ಆಯುತಕರ ಘಟನೆ ನಡೆದಂತೆ ಎಚ್ಚರಿಕೆವಹಿಸಿ ಸರ್ಕಾರಕ್ಕೆ ಬಿಸಿ ಮುಟ್ಟುವಂತಹ ಕೆಲಸವನ್ನು ಮಾಡಬೇಕು ಎಲ್ಲರೂ ಶಾಂತ ರೀತಿಯಿಂದ ನಮ್ಮ ಬೇಡಿಕೆಗಳನ್ನ ಸರ್ಕಾರದ ಮುಂದೆ ಇಡಬೇಕು.

Edited By : PublicNext Desk
Kshetra Samachara

Kshetra Samachara

19/01/2025 08:56 pm

Cinque Terre

2.96 K

Cinque Terre

0

ಸಂಬಂಧಿತ ಸುದ್ದಿ