ಕನಕಪುರ: ತಾಲ್ಲೂಕಿನ ಕಾಡಳ್ಳಿ, ಅರೆಕಟ್ಟೆದೊಡ್ಡಿ, ಸಾತನೂರು ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶರಣ್ಯಗೌಡ ಅಪಘಾತದಲ್ಲಿ ನಿಧನವಾಗಿದ್ದಾರೆ.
ಇವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿ ಬಳೆಹೊನ್ನಿಗ ಗ್ರಾಮದವರಾಗಿದ್ದು ಒಂದು ವರ್ಷದಿಂದ ಕನಕಪುರ ತಾಲ್ಲೂಕು ತಾಲ್ಲೂಕು ಪಂಚಾಯಿತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ತಂದೆಗೆ ಮಾತ್ರೆಗಳನ್ನು ತರಲು ತಮ್ಮ ಸ್ಕೂಟರ್‌ನಲ್ಲಿ ಹಲಗೂರಿಗೆ ಹೋಗುತ್ತಿದ್ದಾಗ ಬಸಾಪುರ ಗೇಟ್ ಬಳಿಯ ಬೈಪಾಸ್ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಇವರ ಸ್ಕೂಟರ್‌ಗೆ ಎದುರುಗಡೆಯಿಂದ ಅತಿ ವೇಗವಾಗಿ ಬರುತ್ತಿದ್ದ ಕೆಟಿಎಂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿಯಾದ ರಭಸಕ್ಕೆ ಶರಣ್ಯ ಸ್ಕೂಟರ್‌ನಿಂದ ಎಗರಿ ಪಕ್ಕಕ್ಕೆ ಬಿದ್ದಾಗ ತಲೆಗೆ ತೀವ್ರ ಪೆಟ್ಟು ಬಿದ್ದು ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಂತರಿಸಿದ್ದಾರೆ. ಬಳೆಹೊನಗ ಗ್ರಾಮದಲ್ಲಿ ಅಂತ್ಯ ಸಂಸ್ಕಾರವು ನೆರವೇರಿದೆ.
ಒಂದು ತಿಂಗಳಲ್ಲಿ ವಿವಾಹ: ಅಪಘಾತದಲ್ಲಿ ಮೃತಪಟ್ಟಿರುವ ಅರಣ್ಯ ಗೌಡ ಅವರ ವಿವಾಹವು ನರೇಗಾ ಇಂಜಿನಿಯರ್ ಆಗಿ ಜೊತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರ ಜೊತೆ ನಿಶ್ಚಿತಾರ್ಥವಾಗಿದ್ದು ಮುಂದಿನ ತಿಂಗಳು ಫೆಬ್ರವರಿ 16ಕ್ಕೆ ವಿವಾಹ ನಿಶ್ಚಯವಾಗಿತ್ತು.
PublicNext
19/01/2025 05:10 pm