", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/405356-1737219732-adi.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SugandaRajuNajangud" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಂಜನಗೂಡು: ಕ್ಷೇತ್ರದ ಜನರು ನಮ್ಮನ್ನು ನಂಬಿ ಅಭಿವೃದ್ಧಿಯನ್ನು ಮಾಡುತ್ತಾರೆ. ನಮಗೆ ಉತ್ತಮವಾದ ಸೌಲಭ್ಯ ಕಲ್ಪಿಸಿ ಕೊಡುತ್ತಾರೆ ಎಂಬ ಮಹಾದಾಸೆಯಿಂದ...Read more" } ", "keywords": "Nanjangud, KDP Meeting, Delayed Meeting, Mute Spectators, Government Officials, Karnataka News, Indian Politics, Local Administration, Civic Issues,Mysore,Government", "url": "https://publicnext.com/node" } ನಂಜನಗೂಡು: ತಡವಾಗಿ ನಡೆದ ಕೆಡಿಪಿ ಸಭೆ - ಮೂಕ ಪ್ರೇಕ್ಷಕರಾದ ಅಧಿಕಾರಿಗಳು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ತಡವಾಗಿ ನಡೆದ ಕೆಡಿಪಿ ಸಭೆ - ಮೂಕ ಪ್ರೇಕ್ಷಕರಾದ ಅಧಿಕಾರಿಗಳು

ನಂಜನಗೂಡು: ಕ್ಷೇತ್ರದ ಜನರು ನಮ್ಮನ್ನು ನಂಬಿ ಅಭಿವೃದ್ಧಿಯನ್ನು ಮಾಡುತ್ತಾರೆ. ನಮಗೆ ಉತ್ತಮವಾದ ಸೌಲಭ್ಯ ಕಲ್ಪಿಸಿ ಕೊಡುತ್ತಾರೆ ಎಂಬ ಮಹಾದಾಸೆಯಿಂದ ಸಹಕಾರವನ್ನು ನೀಡಿ ಕ್ಷೇತ್ರದಲ್ಲಿ ಅಧಿಕಾರವನ್ನು ನೀಡಿದ್ದಾರೆ. ಅವರ ಸೇವೆಗೆ ಜನಪ್ರತಿನಿಧಿಗಳಾದ ನಾವು ಮತ್ತು ಅಧಿಕಾರಿಗಳಾದ ನೀವು ಪ್ರಾಮಾಣಿಕ ಸೇವೆಗೆ ಮುಂದಾಗಬೇಕು ಎಂದು ನಂಜನಗೂಡಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಮೈಸೂರು ಮತ್ತು ತಾಲ್ಲೂಕು ಪಂಚಾಯಿತಿ ನಂಜನಗೂಡು ಇವರ ವತಿಯಿಂದ ತ್ರೈಮಾಸಿಕ ಕೆಡಿಪಿ ಸಭೆಯನ್ನು ನಡೆಸಲಾಯಿತು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಮೊದಲನೇ ಕೆಡಿಪಿ ಸಭೆಯಾಗಿದ್ದು, ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಪ್ರತಿ ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಯನ್ನು ಆಲಿಸಬೇಕು ಎಂದು ತಿಳಿಸಿದರು.

ನಂಜನಗೂಡಿನ ರಸ ಬಾಳೆ ಬೆಳೆಯುವ ರೈತರಿಗೆ ಮೊದಲ ಆದ್ಯತೆ ನೀಡಬೇಕು. ರಸ ಬಾಳೆಗೆ ಯಾವುದೇ ರೋಗಗಳು ಬರದಂತೆ ಕ್ರಮ ವಹಿಸಬೇಕು. ಈ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ತಾಕೀತು ಮಾಡಿದರು.

ತಾಲ್ಲೂಕಿನಲ್ಲಿರುವ ಕೆರೆಗಳನ್ನು ಗುರುತು ಮಾಡಿ ಕೆರೆ ಒತ್ತುವರಿ ತೆರವುಗೊಳಿಸಬೇಕು. ರೈತರು ತಮ್ಮ ಜಮೀನುಗಳಿಗೆ ತೆರಳಲು ಬಂಡಿದಾರಿ ಮತ್ತು ರಸ್ತೆಗಳನ್ನು ಬಿಡಿಸಿಕೊಡಬೇಕು. ಸ್ಮಶಾನ ಇಲ್ಲದೆ ಇರುವ ಗ್ರಾಮಗಳಲ್ಲಿ ಈ ಕೂಡಲೇ ಸ್ಮಶಾನ ಜಾಗವನ್ನು ನೀಡಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಬೆಳ್ಳಿ ರಥದ ಕೆಲಸವನ್ನು ಕೂಡಲೇ ಪೂರ್ಣಗೊಳಿಸಬೇಕು. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಹೆಚ್ಚುವರಿ ಶೌಚಾಲಯ ಕಟ್ಟಡಗಳನ್ನು ನಿರ್ಮಿಸಿ ಕಪಿಲಾ ನದಿ ಪಾತ್ರದಲ್ಲಿ ಸ್ವಚ್ಛತೆಯನ್ನು ಕಾಪಾಡಿ ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.

Edited By : Vinayak Patil
Kshetra Samachara

Kshetra Samachara

18/01/2025 10:32 pm

Cinque Terre

10.78 K

Cinque Terre

0