", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1737202421-WhatsApp-Image-2025-01-18-at-5.43.07-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SuryaMysore" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು: ಎಟಿಎಂಗೆ ಹಣ ತುಂಬದೆ ಅದನ್ನ ತೆಗೆದುಕೊಂಡ ಹೋದ ಆರೋಪದಲ್ಲಿ ಮೈಸೂರು ಜಿಲ್ಲೆಯ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ FIR ದಾಖಲ...Read more" } ", "keywords": " Mysuru News, ATM Cash Misuse, Gold Purchase Scandal, Corruption Case, Karnataka Crime News, Mysore City News, Bank Employee Arrested, Financial Irregularity.,Mysore,Crime", "url": "https://publicnext.com/node" } ಮೈಸೂರು: ATMಗೆ ತುಂಬಬೇಕಿದ್ದ ಹಣದಿಂದ ಚಿನ್ನ ಖರೀದಿ ಆರೋಪ.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ATMಗೆ ತುಂಬಬೇಕಿದ್ದ ಹಣದಿಂದ ಚಿನ್ನ ಖರೀದಿ ಆರೋಪ.!

ಮೈಸೂರು: ಎಟಿಎಂಗೆ ಹಣ ತುಂಬದೆ ಅದನ್ನ ತೆಗೆದುಕೊಂಡ ಹೋದ ಆರೋಪದಲ್ಲಿ ಮೈಸೂರು ಜಿಲ್ಲೆಯ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ FIR ದಾಖಲಾಗಿದೆ.

ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಟಿಎಲ್ ಎಂಟರ್ ಪ್ರೈಸಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ ಎಟಿಎಂಗೆ ಹಣ‌ ತುಂಬವ ಏಜೆನ್ಸಿ ಪಡೆದಿದ್ದು, ಟಿಎಲ್ ಎಂಟರ್‌ಪ್ರೈಸಸ್ ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಕಂಪನಿ ಪರವಾಗಿ ಅಕ್ಷಯ್ ಹಣ‌ ತುಂಬುತ್ತಿದ್ದ.

ಕಂಪನಿ ಆಡಿಟ್ ಮಾಡಿದಾಗ ಹಣದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಕ್ಯಾಶ್ ಲೋಡಿಂಗ್ ಎಟಿಎಂ ಸಿಸಿ ಕ್ಯಾಮೆರಾ ಪರಿಶೀಲನೆ‌ ಮಾಡಿದಾಗ ಅಕ್ಷಯ್ ಎಟಿಎಂಗೆ ಹಣ ಹಾಕದೆ ಬ್ಯಾಗ್‌ನಲ್ಲಿ ತುಂಬಿಕೊಂಡು ಹೋದ ದೃಶ್ಯ ಸೆರೆಯಾಗಿದೆ. ಗದ್ದಿಗೆ ಗ್ರಾಮದ ಎಟಿಎಂನಲ್ಲಿ 5 ಲಕ್ಷದ 80 ಸಾವಿರ ಹಣ ಲೋಡ್ ಮಾಡಿಲ್ಲ. ಈ ಕೃತ್ಯಕ್ಕೆ ಆಕೆಯ ಪರಿಚಯದ ತೇಜಸ್ವಿನಿ‌ ಎಂಬಾಕೆಯ ಕುಮ್ಮಕ್ಕು ಸಹ ಇರೋ ಆರೋಪದಲ್ಲಿ ಇಬ್ಬರು ಈ ಹಣದಿಂದ ಚಿನ್ನ ಖರೀದಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಿನ್ನದ ಅಂಗಡಿಯಲ್ಲು ಚಿನ್ನ ಖರೀದಿಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಆರೋಪದ ಮೇರೆಗೆ ಇಬ್ಬರ ವಿರುದ್ದ FIR ದಾಖಲಾಗಿದೆ.

Edited By : Shivu K
PublicNext

PublicNext

18/01/2025 05:44 pm

Cinque Terre

24.36 K

Cinque Terre

0