ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಚಾಕು ತೋರಿಸಿ ಮೆಡಿಕಲ್ ಶಾಪ್ ಮಾಲೀಕನ ಹಣ, ಚೈನ್ ದೋಚಿ ಪರಾರಿ.!

ಮೈಸೂರು: ಕೆಲಸ ಮುಗಿಸಿ ಮನೆಯತ್ತ ಸಾಗುತ್ತಿದ್ದ ಮೆಡಿಕಲ್ ಶಾಪ್ ಮಾಲೀಕನಿಗೆ ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಬಂದ ಯುವಕನೋರ್ವ ಅಡ್ಡಗಟ್ಟಿ ಬೆದರಿಸಿ ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾದ ಘಟನೆ ಮೈಸೂರಿನ ವಿಜಯನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಶುಕ್ರವಾರ ರಾತ್ರಿ ಅಂಗಡಿ ಮಾಲೀಕ ಬಾಗಿಲು ಹಾಕಿಕೊಂಡು ಮನೆಗೆ ಹೋಗುತ್ತಿರುವಾಗ ಮಂಕಿ ಕ್ಯಾಪ್ ಧರಿಸಿ ಬೈಕ್‌ನಲ್ಲಿ ಬಂದ ಯುವಕ ಚಾಕು ತೋರಿಸಿ ಬೆದರಿಸಿದ್ದಾರೆ. ಸೋಮಶಂಕರ್ ಅವರ ಕತ್ತಿನ ಭಾಗಕ್ಕೆ ಚಾಕು ಹಿಡಿದ ಹಣ, ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆಂದು ಅಂಗಡಿ ಮಾಲೀಕ ಇಲವಾಲ ಪೋಲಿಸ್ ಠಾಣೆಗೆ ದೂರು‌ ನೀಡಿದ್ದಾರೆ.

Edited By : Vinayak Patil
PublicNext

PublicNext

18/01/2025 04:26 pm

Cinque Terre

24.52 K

Cinque Terre

0