ಬೆಂಗಳೂರು: ಜನವರಿ 19ರಂದು ನೇರಳೆ ಮಾರ್ಗದಲ್ಲಿನ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದು ಕೆಂಪೇಗೌಡ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಮತ್ತು ಇಂದಿರಾ ನಗರ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 7:00 ಯಿಂದ 10:00ವರೆಗೂ 3 ಗಂಟೆಗಳ ಕಾಲ ಮೆಟ್ರೋ ರೈಲು ಸೇವೆ ಇರುವುದಿಲ್ಲ.
ನೇರಳೆ ಮಾರ್ಗದ ಇತರ ಭಾಗಗಳಲ್ಲಿ ಬರುವ ಚೆಲ್ಲಘಟ್ಟ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಹಾಗೂ ವೈಟ್ ಫೀಲ್ಡ್ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ಮೇಲಿನ ಅವಧಿಯಲ್ಲಿ ನಿಗದಿತ ವೇಳಾಪಟ್ಟಿಯಂತೆ ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 7:00 ಪ್ರಾರಂಭವಾಗುತ್ತದೆ ಇಂದು ಬಿ ಎಂ ಆರ್ ಸಿ ಎಲ್ ಮಾಹಿತಿ ತಿಳಿಸಿದೆ.
PublicNext
18/01/2025 02:55 pm