ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಉಡುಪಿ: ಉಡುಪಿ ಮತ್ತು ಮಂಗಳೂರಿನಲ್ಲಿ ಒಂದು ವಾರ ಕಾಲ ನಡೆಯಲಿರುವ ಮೂರನೇ ಕರ್ನಾಟಕ ಕ್ರೀಡಾಕೂಟದಲ್ಲಿ ಬೆಂಗಳೂರಿನ ಸಮರಾ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ಕ್ರೀಡಾಕೂಟದ ಮೊದಲ ಸ್ಪರ್ಧೆಯಾದ ಮಹಿಳೆಯರ 500ಮೀ. ಕಯಾಕಿಂಗ್ ಕೆ-1 ಸ್ಪರ್ಧೆಯಲ್ಲಿ ಅವರು ನಿರೀಕ್ಷೆಯಂತೆ ಮೊದಲಿಗರಾಗಿ ಗುರಿಮುಟ್ಟಿ ಕೂಟದ ಮೊಟ್ಟಮೊದಲ ಚಿನ್ನದ ಪದಕ ಗೆದ್ದುಕೊಂಡರು. ಕೆಲವೇ ಗಂಟೆಗಳ ಅಂತರದಲ್ಲಿ ಅವರು ಇನ್ನೂ ಮೂರು ಚಿನ್ನದ ಪದಕಗಳನ್ನು ಜಯಿಸಿ ಮೊದಲ ದಿನವೇ ನಾಲ್ಕು ಚಿನ್ನದ ಪದಕ ಗೆದ್ದ ವಿಶಿಷ್ಟ ಸಾಧನೆ ಮಾಡಿದರು.

ಬೆಂಗಳೂರಿನವರಾದ 19ವರ್ಷ ಪ್ರಾಯದ ಸಮರಾ ಎ.ಚಾಕೋ ಬಿಬಿಎಂ ವಿದ್ಯಾರ್ಥಿನಿಯಾಗಿದ್ದು ಇದೀಗ ಸೀನಿಯ‌ರ್ ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದುಕೊಂಡಿದ್ದಾರೆ. ಈವರೆಗೆ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ದೇಶವನ್ನೂ ಪ್ರತಿನಿಧಿಸಿದ್ದ ಇವರು ಹಲವಾರು ಪದಕಗಳನ್ನು ಗೆದ್ದು ಕೊಂಡಿದ್ದರು.

Edited By : PublicNext Desk
Kshetra Samachara

Kshetra Samachara

18/01/2025 10:34 am

Cinque Terre

386

Cinque Terre

0

ಸಂಬಂಧಿತ ಸುದ್ದಿ