ಕಾಪು: ಸೆಕೆಂಡ್ ಹ್ಯಾಂಡ್ ಬಸ್ ಅನ್ನು ಅದರ ಹಿಂದಿನ ಮಾಲೀಕ ಹಾಗೂ ಆತನ ತಂದೆ ಕಳ್ಳತನ ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನ ಕೊರಟಗೆರೆ ತಾಲೂಕಿನ ಸೈಯದ್ ಗೌಸ್ ಹೆಚ್.ಎಸ್ ಮೋಸ ಹೋದವರು. ಓಎಲ್‌ಎಕ್ಸ್‌ನಲ್ಲಿ ಸಿಕ್ಕ ನಂಬರ್ ಮೂಲಕ ಕೊರಟಗೆರೆ ತಾಲೂಕಿನ ಗೌಸ್ ಅವರು, ಕಾಪುವಿನ ಸಮೀರ್ ಅವರನ್ನು ಸಂಪರ್ಕಿಸಿದ್ದರು.ಕೆಲವು ದಿನಗಳ ನಂತರ ಗೌಸ್ ಇತರ ಇಬ್ಬರೊಂದಿಗೆ 2017 ಮಾಡೆಲ್ ಬಸ್ ಅನ್ನು ಪರಿಶೀಲಿಸಲು ಕಾಪುವಿಗೆ ಹೋಗಿದ್ದರು. ಮತ್ತು ಅದನ್ನು 9.50 ಲಕ್ಷ ರೂಪಾಯಿಗೆ ಖರೀದಿಸಲು ಒಪ್ಪಿಕೊಂಡರು. ಅಲ್ಲದೆ ಮುಂಗಡವಾಗಿ 2 ಲಕ್ಷ ರೂಪಾಯಿ ಬಳಿಕ ಫೋನ್ ಪೇ ಮತ್ತು ನಗದು ಮೂಲಕ ಉಳಿದ ಮೊತ್ತವನ್ನು ನೀಡಿದ್ದರು. ಇದಾದ ನಂತರ ಸಮೀರ್ ಮತ್ತು ಆತನ ತಂದೆ ತುಮಕೂರಿನಲ್ಲಿ ನಿಲ್ಲಿಸಿದ್ದ ಬಸ್ ಅನ್ನು ಕದ್ದು ತಂದಿದ್ದಾಗಿ ಆರೋಪಿಸಿ ಗೌಸ್ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Kshetra Samachara
17/01/2025 06:57 pm