", "articleSection": "Infrastructure,Crime,Law and Order,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737107487-A7~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShirahattiGowrish" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಹಟ್ಟಿ: ಇತ್ತೀಚಿನ ದಿನಗಳಲ್ಲಿ ಅಪಘಾತಗಳಿಂದ ಮೃತ ಪಟ್ಟಿರುವವರ ಸಂಖ್ಯೆ ಹೆಚ್ಚುತ್ತಿದೆ. ಬೈಕ್ ಸವಾರರು ತಮಗಾಗಿ ಅಲ್ಲದಿದ್ದರೂ ತಮ್ಮ ಕುಟುಂಬಕ್...Read more" } ", "keywords": "police,helmet, shirahatti.gadag ,Gadag,Infrastructure,Crime,Law-and-Order,News,Public-News", "url": "https://publicnext.com/node" }
ಶಿರಹಟ್ಟಿ: ಇತ್ತೀಚಿನ ದಿನಗಳಲ್ಲಿ ಅಪಘಾತಗಳಿಂದ ಮೃತ ಪಟ್ಟಿರುವವರ ಸಂಖ್ಯೆ ಹೆಚ್ಚುತ್ತಿದೆ. ಬೈಕ್ ಸವಾರರು ತಮಗಾಗಿ ಅಲ್ಲದಿದ್ದರೂ ತಮ್ಮ ಕುಟುಂಬಕ್ಕಾಗಿ ಹೆಲ್ಮೆಟ್ ಧರಿಸಬೇಕು ಎಂದು ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಚನ್ನಯ್ಯ ದೆವೂರ ಹೇಳಿದರು.
ಅಲ್ಲದೆ ಹೆಲ್ಮೆಟ್ ಧರಿಸದೆ ಬರುವ ಬೈಕ್ ಸವಾರರಿಗೆ ತಮ್ಮ ಸ್ವಂತ ಖರ್ಚಿನಲ್ಲಿ 30 ಹೆಲ್ಮೆಟ್ ಗಳನ್ನು ಉಚಿತವಾಗಿ ನೀಡಿದರು.
ಹೌದು.... ಇಂದು ಪಟ್ಟಣದ ನೆಹರು ಸರ್ಕಲ್ ಹತ್ತಿರ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಅಂಗವಾಗಿ ಸಿಪಿಐ ನಾಗರಾಜ ಮಾಡೊಳ್ಳಿ ಅವರು ಹೆಲ್ಮೆಟ್ ಧರಿಸಿ ಬರುವ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ, ಹೀಗೆ ಯಾವಾಗಲೂ ಬೈಕ್ ಚಾಲನೆ ಮಾಡುವ ಸಮಯದಲ್ಲಿ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದರು.
ಪಿಎಸ್ಐ ಚನ್ನಯ್ಯ ದೆವೂರ ಅವರು ಹೆಲ್ಮೆಟ್ ಧರಿಸದೆ ಬರುವ ಸವಾರಿಗೆ ಉಚಿತವಾಗಿ ಹೆಲ್ಮೆಟ್ ನೀಡಿದ ಬಳಿಕವೂ, ಹೆಲ್ಮೆಟ್ ಧರಿಸದೆ ಬರುವ ಬೈಕ್ ಸವಾರರಿಗೆ ಆನ್ ಲೈನ್ ತಂತ್ರಾಂಶಗಳ ಮೂಲಕ ದಂಡ ವಿಧಿಸಿ ಪಾವತಿ ಮಾಡಲು ಹೇಳಿದರು. ಸ್ಥಳದಲ್ಲಿ ದಂಡ ಪಾವತಿ ಮಾಡದ ಸವಾರರ ಬೈಕ್ ಗಳನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು.
ಆಗ ಬೈಕ್ ಸವಾರರು ಬೇರೆ ದಾರಿ ಇಲ್ಲದೆ ಠಾಣೆಯಲ್ಲಿ ದಂಡ ಕಟ್ಟಿ ತಮ್ಮ ಗಾಡಿಗಳನ್ನು ತೆಗೆದುಕೊಂಡು ಹೋದರು. ಅಲ್ಲದೆ, ಇನ್ನು ಮುಂದೆ ಹೆಲ್ಮೆಟ್ ಹಾಕಿಕೊಂಡು ಬೈಕ್ ಸವಾರಿ ಮಾಡುತ್ತೇವೆ ಎಂದು ಹೇಳಿದರು.
Kshetra Samachara
17/01/2025 03:21 pm