ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕರ ವರ್ತನೆ ಬಸ್ ಪ್ರಯಾಣಿಕರ ಜೀವಕ್ಕೆ ಬೆಲೆಯೇ ಇಲ್ವಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ರನ್ನಿಂಗ್ ಬಸ್ ನಲ್ಲಿ ರೀಲ್ಸ್ ನೋಡಿಕೊಂಡೇ ಬಸ್ ಚಾಲನೆ ಮಾಡಿರುವ ವಿಡಿಯೋ ಈ ಪ್ರಶ್ನೆ ಹುಟ್ಟುವ ಹಾಗಾಗಿದೆ. ರೀಲ್ಸ್ ಸ್ಕ್ರಾಲ್ ಮಾಡುತ್ತ, ಮಾಡುತ್ತಲೇ ಬಸ್ ಚಾಲನೆ ಮಾಡಿರುವುದು ಪೀಕ್ ಅವರ್ ಟ್ರಾಫಿಕ್ ಮಧ್ಯೆ ಜವಾಬ್ದಾರಿ ಮರೆತ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತ ಆಗಿದೆ.
ಹೊಸೂರು ರೋಡ್ ಟು ಲಾಲ್ ಬಾಗ್ ಮಾರ್ಗದ ಕೆಎ 51 ಎಜೆ 7391ನಂಬರ್ ಬಸ್ ಇದಾಗಿದ್ದು ರೂಟ್ ನಂಬರ್ 15 ರ ಬಸ್ ಸಂಚಾರ ಮಾಡುವಾಗ ರೀಲ್ಸ್ ನೋಡಿಕೊಂಡೇ ಬಸ್ ಓಡಿಸುವ ದೃಶ್ಯ ಕಂಡು ಬಂತು. ಘಟನೆ ವಿಡಿಯೋವನ್ನ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿರೋ ಮಹಿಳೆ ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆಗೆ ಅವಕಾಶ ಇಲ್ಲದಿದ್ರು ಈ ರೀತಿ ನಿರ್ಲಕ್ಷ್ಯ ಎಷ್ಟು ಸರಿ ಕೂಡಲೇ ಈತನ ವಿರುದ್ಧ ಕ್ರಮ ಕೈಗೊಳ್ಳಿ ಅಂತ X ನಲ್ಲಿ ಮನವಿ ಮಾಡಿದ್ದಾರೆ.
PublicNext
17/01/2025 03:18 pm