ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ಜನರನ್ನು ಕೈ ಬೀಸಿ ಕರೆಯುತ್ತಿರುವ ಫಲಪುಷ್ಪ ಪ್ರದರ್ಶನ....

ವಿಜಯಪುರ : ವಿಜಯಪುರದ ಸಿದ್ದೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಜನರನ್ನು ಕೈ ಬೀಸಿ ಕರೆಯುತ್ತಿದೆ. ದ್ರಾಕ್ಷಿಯಿಂದ ಸಿದ್ದಪಡಿಸಲಾದ ಗೋಳಗುಮ್ಮಟ ಸೇರಿದಂತೆ ಹೂವಿನಿಂದ ಮಾಡಲಾದ ಹಲವು ಬಗೆಯ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತಿದೆ.

ಹೌದು ಗುಮ್ಮಟ ನಗರಿ ವಿಜಯಪುರ ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ

ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು‌ಆಯೋಜಿಸಲಾಗಿದೆ.‌ಇನ್ನೂ

ಈ ಬಾರಿ ಮೇಳದಲ್ಲಿ 40 ಕ್ಕೂ ಅಧಿಕ ಮಳಿಗೆಗಳನ್ನ ಹಾಕಲಾಗಿದೆ.

ಸಿದ್ದೇಶ್ವರ ಸ್ವಾಮೀಜಿ ಅವರ ಡಿಜಿಟಿಲ್ ಛಾಯಾಚಿತ್ರ ಪ್ರದರ್ಶನ. ತರಕಾರಿಗಳಿಂದ‌ ಸಿಂಗರಿಸಲಾದ ರಂಗೋಲಿ, ವಿವಿಧ ಬಣ್ಣ ಬಣ್ಣದ ಹೂಗಳು ಫಲಪುಷ್ಪ ಪ್ರದರ್ಶನಗಳು ನೋಡಲು ಬಂದ ಜನರನ್ನು ಕೈ ಬೀಸಿ ಕರೆಯುತ್ತಿವೆ.

ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಜನರಿಗೆ ಹೈಡ್ರೋಫ್ಲೋನಿಕ್ ಕೃಷಿ ಪರಿಚಯಿಸಲು ಪ್ರದರ್ಶನ ಮಾಡಲಾಗ್ತಿದೆ. ದ್ರಾಕ್ಷಿಯ ಕಣಜ‌ ಎಂದು ಕರೆಯಲ್ಪಡುವ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿಯಿಂದ ಸುಂದರವಾದ ಸುಮಾರು 7 ಅಡಿಯಷ್ಟು ಎತ್ತರದ ಗೋಳ ಗುಮ್ಮಟ ಗಮನ ಸೆಳೆಯುತ್ತಿದೆ.

ಒಟ್ಟಾರೆಯಾಗಿ ಸಿದ್ದೇಶ್ವರ ಜಾತ್ರೆಯ ಅಂಗವಾಗಿ ಆಯೋಜನೆ ಮಾಡಲಾದ ಫಲಪುಷ್ಪ ಪ್ರದರ್ಶನಕ್ಕೆ ಗುಮ್ಮಟ ನಗರಿಯ ಜನ ಬಹುಪರಾಕ್ ಎಂದಿದ್ದಾರೆ.

ಮಂಜು ಕಲಾಲ ಪಬ್ಲಿಕ ನೆಕ್ಸ್ಟ ವಿಜಯಪುರ

Edited By : Suman K
PublicNext

PublicNext

16/01/2025 04:09 pm

Cinque Terre

5.64 K

Cinque Terre

0