ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಲೂರು : ಕಾಡಾನೆ ದಾಳಿ - ತೆಂಗು ಬೆಳೆ ನಾಶ

ಬೇಲೂರು : ಕಾಡಾನೆಗಳ ಹಿಂಡಿನ ದಾಳಿಗೆ ನೂರಕ್ಕೂ ಹೆಚ್ಚು ತೆಂಗಿನಮರಗಳು ನಾಶವಾಗಿರುವ ಘಟನೆ ಬೇಲೂರು ತಾಲ್ಲೂಕಿನ, ಮಾಳೇಗೆರೆ ಗ್ರಾಮದಲ್ಲಿ ನಡೆದಿದೆ.

ಇಂದು ಮುಂಜಾನೆ ದಾಳಿ ಮಾಡಿರುವ ನಲವತ್ತಕ್ಕೂ ಹೆಚ್ಚು ಕಾಡಾನೆಗಳು,ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನೂರಾರು ತೆಂಗಿನಮರಗಳನ್ನು ನಾಶ ಮಾಡಿವೆ.

ಗ್ರಾಮದ ಗಿರೀಶ್ ಎಂಬುವವರು ತಮ್ಮ ಜಮೀನಿನಲ್ಲಿ ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರಗಳನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ.

ಕಳೆದ ಒಂದು ತಿಂಗಳ‌ ಹಿಂದೆಯಷ್ಟೇ ನೂರಕ್ಕೂ ಹೆಚ್ಚು ತೆಂಗಿನಮರಗಳನ್ನು ಕಾಡಾನೆಗಳು ನಾಶ ಮಾಡಿದ್ದವು,ಪುನಃ ಇಂದು ಮುಂಜಾನೆ ದಾಳಿ ಮಾಡಿ ಉಳಿದಿದ್ದ ಎಲ್ಲಾ ತೆಂಗಿನಮರಗಳನ್ನು ನಾಶ ಮಾಡಿವೆ,ಫಲಸಿಗೆ ಬಂದಿದ್ದ ನೂರಾರು ತೆಂಗಿನಮರಗಳನ್ನು ಕಳೆದುಕೊಂಡು ಅನ್ನದಾತ ಕಣ್ಣೀರಿಟ್ಟಿದ್ದಾರೆ, ಇಷ್ಟಾದರೂ, ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : PublicNext Desk
PublicNext

PublicNext

16/01/2025 02:31 pm

Cinque Terre

24.35 K

Cinque Terre

0

ಸಂಬಂಧಿತ ಸುದ್ದಿ