", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/43595620250116075233filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು : ಗಡಿ ಭಾಗದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಯರ್‌ಕಟ್ಟೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್‌ನೊಳಗೆ ವ್ಯಕ್ತಿಯ...Read more" } ", "keywords": "Node,Mangalore,Crime,Udupi", "url": "https://publicnext.com/node" } ಮಂಜೇಶ್ವರ : ಟಿಪ್ಪರ್ ನ ಒಳಗೆ ಯುವಕ ನಿಗೂಢ ಸಾವು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಜೇಶ್ವರ : ಟಿಪ್ಪರ್ ನ ಒಳಗೆ ಯುವಕ ನಿಗೂಢ ಸಾವು

ಮಂಗಳೂರು : ಗಡಿ ಭಾಗದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಯರ್‌ಕಟ್ಟೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್‌ನೊಳಗೆ ವ್ಯಕ್ತಿಯೊಬ್ಬನ ಮೃತ ದೇಹ ಸಿಕ್ಕಿದ್ದು, ಪೈವಳಿಕೆ ಬಾಯಾರು ಪದವು ಕ್ಯಾಂಪ್ಕೋ ಕಂಪೌಂಡ್‌ ಬಳಿಯ ಮುಹಮ್ಮದ್‌ ಆಶಿಫ್‌ (29) ಎಂದು ಗುರುತಿಸಲಾಗಿದೆ.

ಬುಧವಾರ ಮುಂಜಾನೆ 3.20ಕ್ಕೆ ಟಿಪ್ಪರ್‌ನೊಳಗೆ ಆಶಿಫ್‌ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಹೈವೇ ಪಟ್ರೋಲಿಂಗ್‌ ಪೊಲೀಸ್‌ ಹಾಗೂ ಸ್ಥಳೀಯರು ಅಶಿಫ್ ಅವರನ್ನು ಬಂದ್ಯೋ ಡ್‌ನ‌ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಕುಂಬಳೆಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ, ಫೋನ್‌ ಕರೆ ಬಂದ ಹಿನ್ನೆಲೆಯಲ್ಲಿ ಮುಂಜಾನೆ 2 ಕ್ಕೆ ಆಶಿಫ್‌ ತನ್ನ ಟಿಪ್ಪರ್‌ ಸಹಿತ ಮನೆ ಯಿಂದ ತೆರಳಿದ್ದರು.

ಸಂಬಂಧಿಕನೋರ್ವ ಫೋನ್‌ ಮಾಡಿದ್ದಾಗಿ ಹೇಳಲಾಗಿದೆ. ಉಪ್ಪಳಕ್ಕೆ ತಲುಪಬೇಕಾದ ಸಮಯವಾದರೂ ತಲುಪದ ಕಾರಣ, ಮನೆಯಿಂದ 3 ಕಿ.ಮೀ ದೂರದ‌ ಕಾಯರ್‌ಕಟ್ಟೆಯ ರಸ್ತೆ ಬದಿ ಟಿಪ್ಪರ್‌ ನಿಲ್ಲಿಸಿದ್ದು ಕಂಡುಬಂದಿತು. ಆಶಿಫ್‌ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವು ಸಂಭವಿ ಸಿರಬಹುದು ಎಂದು ಶಂಕಿಸಿದ್ದರೂ ಪ್ರಕರಣ ನಿಗೂಢವಾಗಿದೆ.

ಟಿಪ್ಪರ್‌ನೊಳಗೆ ಬೆತ್ತ, ರಕ್ತದ ಕಲೆಗಳು ಪತ್ತೆ

ಚಾಲಕನ ಸೀಟಿನ ಬಳಿಯ ಬಾಗಿಲು ಹಾಗೂ ಟಿಪ್ಪರ್‌ನೊಳಗೆ ರಕ್ತದ ಕಲೆಗಳು, ದಾರಿಯಲ್ಲಿ ಒಂದು ಬೆತ್ತ ಕೂಡಾ ಕಂಡುಬಂದಿದೆ. ಆಶಿಫ್‌ ಅವರ ಪಾದರಕ್ಷೆಗಳು ರಸ್ತೆ ಬದಿಯಲ್ಲಿದ್ದವು. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

16/01/2025 07:53 am

Cinque Terre

2.13 K

Cinque Terre

0