ಹಾಸನ: ಕಳ್ಳತನದ ವಿಚಾರವನ್ನು ಬಾಯ್ಬಿಡುತ್ತಾನೆ ಎಂದು ಆಪ್ತ ಸ್ನೇಹಿತನ ಕೊಲೆಗೈದು ಶಿರಾಡಿ ಘಾಟ್‌ನ ಪ್ರಪಾತಕ್ಕೆ ಎಸೆದಿರುವ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಶಿವಕುಮಾರ್ (34) ಮೃತ ಯುವಕ. ಅದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಎಂಬುವರು ಕೃತ್ಯ ಎಸಗಿದ್ದು ನಾಪತ್ತೆಯಾಗಿದ್ದಾರೆ.
ಈ ಇಬ್ಬರು ಮಾಡಿರುವ ಕಳ್ಳತನದ ಬಗ್ಗೆ ಶಿವಕುಮಾರ್‌ಗೆ ತಿಳಿದಿತ್ತು. ಆ ವಿಚಾರ ಬಾಯ್ಬಿಡುತ್ತಾನೆ ಎಂದು ಹೈದರಾಬಾದ್‌ನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ ಶಿವಕುಮಾರ್‌ನನ್ನು ಕರೆಸಿಕೊಂಡಿದ್ದರು. ಕಳೆದ ಶುಕ್ರವಾರ ಜೊತೆಗೆ ಕರೆದೊಯ್ದು ಕಂಠಪೂರ್ತಿ ಕುಡಿಸಿ ಹಲ್ಲೆ ನಡೆಸಿದ್ದರು. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ನಂತರ ಶಿರಾಡಿಘಾಟ್‌ನ ಗುಂಡ್ಯದ ಬಳಿ ಶವ ಬಿಸಾಡಿದ್ದರು. ಈ ವೇಳೆ ಹಂತಕರಿಂದ ತಪ್ಪಿಸಿಕೊಂಡು ಬಂದಿದ್ದ ದಿಲೀಪ್ ಎಂಬಾತ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪರಿಶೀಲನೆ ನಡೆಸಿದಾಗ ಸತ್ಯ ತಿಳಿದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
13/01/2025 12:30 pm