ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ನವಜಾತ ಶಿಶು ಚರಂಡಿ ಪಾಲು- ಹೃದಯ ಶೂನ್ಯ ಹೆತ್ತವರಿಗೆ ಜನ ಹಿಡಿಶಾಪ

ಹಾಸನ: ಆಗ ತಾನೇ ಹುಟ್ಟಿದ ನವಜಾತ ಶಿಶುವನ್ನು ಚರಂಡಿಗೆ ಬಿಸಾಡಿ ಹೋಗಿರುವ ಘಟನೆ ಭಾನುವಾರ ಮಧ್ಯಾಹ್ನ ಬೆಳಕಿಗೆ ಬಂದಿದ್ದು, ಈ ದೃಶ್ಯ ನೋಡಿದ ಮಹಿಳೆಯರು ಮಗು ಬಿಸಾಡಿದವರ ಮೇಲೆ ಹಿಡಿಶಾಪ ಹಾಕತ್ತಿರುವುದು ಕಂಡು ಬಂದಿತು.

ಹೇಮಾವತಿ ನಗರದ ಕಾರ್ಮೆಲ್ ಚರ್ಚ್ ಬಳಿ ಇರುವ ಚರಂಡಿ ಒಳಗೆ ಈ ನವಜಾತ ಶಿಶುವನ್ನು ಒಂದು ಕವರ್ ಒಳಗೆ ಕಟ್ಟಿ ಬಿಸಾಡಿ ಹೋಗಿದ್ದಾರೆ. ಚರಂಡಿಯಲ್ಲಿ ಬಿದ್ದ ಮಗು ಕಂಡ ಜನರು ಮರುಕ ವ್ಯಕ್ತಪಡಿಸಿದರು.

ಈ ಕಂದಮ್ಮನನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಇದೇ ವೇಳೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದರು.

ಪೆನ್ನನ್ ಮೊಹಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮಗು ನೋಡಲು ಸಾರ್ವಜನಿಕರ ದೊಡ್ಡ ಗುಂಪೇ ಸೇರಿತ್ತು.

ಯಾರೋ ಅಕ್ರಮವಾಗಿ ಪಡೆದ ಮಗುವನ್ನು ಬಿಸಾಡಿ ಹೋಗಿದ್ದಾರೆ. ಇಲ್ಲವೇ ಹೆಣ್ಣು ಮಗು ಹುಟ್ಟಿದೆ ಎಂದು ಸಾಕಲಾಗದೇ ಬಿಸಾಡಿರಬಹುದು ಎಂದು ಸಾರ್ವಜನಿಕರು ಅಲ್ಲಲ್ಲಿ ಗುಸುಗುಸು ಮಾತನಾಡುತ್ತಿರುವುದು ಕೇಳಿ ಬಂದಿತು.

Edited By : Vinayak Patil
PublicNext

PublicNext

02/02/2025 08:46 pm

Cinque Terre

40.19 K

Cinque Terre

1