ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಕಲುಷಿತ ಆಹಾರ ಹಾಸ್ಟೆಲ್ ವಿದ್ಯಾರ್ಥಿಗಳ ಆಕ್ರೋಶ

ಹಾವೇರಿ : ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಹಾವೇರಿ ಇಂಜನೀಯರಿಂಗ್ ವಿದ್ಯಾರ್ಥಿಗಳು ಆಹಾರ ಸೇವನೆ ಮಾಡದೆ ಪ್ರತಿಭಟನೆ ನಡೆಸಿದರು. ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ, ಕೊಳೆತಮೊಟ್ಟೆ, ಹಾಳಾದ ಬಾಳೆಹಣ್ಣು, ಅಕ್ಕಿಯಲ್ಲಿ ಇಲಿಯ ಹಿಕ್ಕೆ, ನೊರಜು ಆಡುತ್ತಿರೋ ತರಕಾರಿ, ಒಗ್ಗರಣೆ ಇಲ್ಲದ ಅವಲಕ್ಕಿ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಪ್ರತಿನಿತ್ಯವೂ ಬೆಳಗ್ಗೆ ಸರಿಯಾದ ಉಪಹಾರ ವ್ಯವಸ್ಥೆ ಇಲ್ಲ. ಊಟಕ್ಕೆ ಚಪಾತಿ ಬಿಟ್ಟರೆ ರೊಟ್ಟಿ ಮಾಡೋದಿಲ್ಲ. ಅವಲಕ್ಕಿ ಒಗ್ಗರಣೆ ನೋಡಿದರೆ ಸಾಂಬಾರ ಮಾಡಿ ಅದಕ್ಕೆ ಹಾಕುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಹಾಸ್ಟೆಲ್ ನಲ್ಲಿ ಮೇಲ್ವಿಚಾರಕ ಪಾಟೀಲ ತಮ್ಮ ತಪ್ಪು ಒಪ್ಪಿಕೊಂಡರು. ಸಣ್ಣಪುಟ್ಟ ಅವ್ಯವಸ್ಥೆಯಾಗಿದೆ. ಹೊಸ ಮೆನು ಪ್ರಕಾರ ಊಟ ಕೊಡಲು ವಿದ್ಯಾರ್ಥಿಗಳು ಕೇಳುತ್ತಿದ್ದಾರೆ ಅವರ ಬೇಡಿಕೆಯಂತೆ ಆಹಾರ ಪೂರೈಸುವದಾಗಿ ಪಾಟೀಲ್ ತಿಳಿಸಿದರು.

Edited By : Vinayak Patil
PublicNext

PublicNext

12/01/2025 10:15 am

Cinque Terre

45.1 K

Cinque Terre

0