ಸುರಪುರ : ಸುರಪುರ ಜನತೆ ಬಗ್ಗೆ, ರೈತರ ಬಗ್ಗೆ ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಜನರು ಏನೂ ಕೇಳಲ್ಲ ಅಂತಾ ತಿಳಿದುಕೊಳ್ಳಬೇಡಿ ಕೆಎಸ್ ಆರ್ ಟಿಸಿ ಅಧಿಕಾರಿಗಳು ಮನಬಂದಂತೆ ಬಸ್ ಗಳ ಸಂಚಾರ ಕಡಿಮೆ ಮಾಡ್ತಿದ್ದಾರೆ ಅಂತಾ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ರಾಜೂಗೌಡ ಆರೋಪಿಸಿದರು.
ಸರ್ಕಾರ ಮಹಿಳೆಯರಿಗೆ ಬಸ್ ಫ್ರೀ ಮಾಡಿದ್ದಾರೆ ಆದ್ರೆ ಕ್ಷೆತ್ರದಲ್ಲಿ ಎಲ್ಲವನ್ನು ಕಟ್ ಮಾಡ್ತಿದ್ದು,ಈಗಿರುವ ಸ್ಥಳೀಯ ಶಾಸಕರು ಇದರ ಬಗ್ಗೆ ಹಾಗೂ ರೈತರಿಗೆ ನೀರು ಕೊಡಿಸುವ ವಿಚಾರವಾಗಿ ಧ್ವನಿ ಎತ್ತಬೇಕು ಅಂತಾ ಹೇಳಿದರು.
ಇನ್ನು ಅಧಿಕಾರಿಗಳು ಏನಾದ್ರು ರೈತರಿಗೆ ನೀರು ಕೊಡಲ್ಲ ಎಂದು ಬೇಕಾ ಬಿಟ್ಟಿಯಾಗಿ ಹೇಳಿದರೆ ನೀವೂ ಯಾರೇ ಆಗಿರಿ ಜನರು ನಿಮ್ಮನ್ನ ಬಿಡೋಲ್ಲ. ಇದಲ್ಲದೆ ನಾರಾಯಣಪುರ ಡ್ಯಾಂನಲ್ಲಿ ನೀರು ಇದ್ರೂ ವಾರ ಬಂದಿ ಮಾಡ್ತಿದ್ದು, ಸರಿಯಾಗಿ ನೀರು ಬಿಡಿ ಅಂತಾ ಎಚ್ಚರಿಸಿದರು.
PublicNext
12/01/2025 09:29 am