ಸುರಪುರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಸುರಪುರ ನಗರಕ್ಕೆ ಮನೆ ಮನೆಗೆ 24 x7 ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, 8 ಸಾವಿರ ಲೀಟರ್ ನೀರಿಗೆ 56 ರೂಪಾಯಿ ತೆಗೆದುಕೊಳ್ಳುವ ಬದಲು ನಗರಸಭೆಯ ಅಧಿಕಾರಿಗಳು 120 ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ ಅಂತಾ ಮಾಜಿ ಸಚಿವ ರಾಜೂಗೌಡ ಅವರು ಆರೋಪಿಸಿದರು.
ಇನ್ನು ಸುರಪುರ ಜನತೆ ಎಚ್ಚತ್ತುಕೊಳ್ಳಬೇಕು 2 ಸಾವಿರ ಲೀಟರ್ ವರೆಗೆ ನೀರು ಬಳಿಸಿದರೆ ತಿಂಗಳಿಗೆ 56 ರೂಪಾಯಿ ಮಾತ್ರ ಕಟ್ಟಬೇಕು ನಗರಸಭೆ ಅಧಿಕಾರಿಗಳು ಡಬಲ್ ಹಣ ವಸೂಲಿ ಮಾಡುತ್ತಿದ್ದಾರೆ ಅಂತಾ ಹೇಳಿದರು.
ಇದಲ್ಲದೇ... ನಮ್ಮ ಅವಧಿಯಲ್ಲಿ ಇದೊಂದು ಕನಸಿನ ಯೋಜನೆಯಾಗಿತ್ತು ಈಗಿರುವ ಶಾಸಕರು ಅಧಿಕಾರಿಗಳು ಈ ರೀತಿ ಜನರ ಮೇಲೆ ಹೊರೆ ಹಾಕುವಂತ ಕೆಲಸ ಮಾಡಬಾರದು ಎಂದರು.
ಇನ್ನು ಕೊಳಚೆ ಮಂಡಳಿ ಅಭಿವೃದ್ಧಿ ಮಂಡಳಿಯಿಂದ ನಗರದಲ್ಲಿ ನಿರ್ಮಿಸಿದ ಮನೆಗಳಿಗೆ ಫಲಾನುಭವಿಗಳು ಡಿಡಿ ಕಟ್ಟಿದ್ದು, ಅದನ್ನು ತೆಗೆದು ಹಾಕಿದರೆ ಶಾಸಕರ, ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
11/01/2025 10:45 pm