ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಜೆಪಿ ರೆಬಲ್ಸ್‌ಗಳ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳಲಿದ್ಯಾ? ಮಾಜಿ ಸಚಿವರು, ಶಾಸಕರ ಸಭೆಯಲ್ಲಿ ಬಿಎಸ್‌ವೈ ಹೇಳಿದ್ದೇನು?

ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಮಾಜಿ ಸಚಿವ ಮಾಜಿ ಶಾಸಕರು ಮತ್ತು ಮಾಜಿ ಎಂಎಲ್ಸ್ ಗಳೊಂದಿಗೆ ಸಭೆ ನಡೆಸಿದ್ರು. ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡ, ಆರ್ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಸೇರಿದಂತೆ 130 ಕ್ಕೂ ಹೆಚ್ಚು ಮಾಜಿ ಶಾಸಕರುಗಳು ಭಾಗಿಯಾಗಿದ್ರು, ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ರೆಬೆಲ್ ಗಳ ವಿರುದ್ಧ ಕ್ರಮದ ಬಗ್ಗೆ ಸುಳಿವು ನೀಡಿದ್ದಾರೆ.

ಭಿನ್ನರ ಹೆಸರು ಹೇಳದೇ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ, ಸಂಘಟನೆ ಬಲಪಡಿಸಲು ನೀವು ಕರೆದ ಕಡೆಗಳಲ್ಲಿ ನಾನು ಬರುತ್ತೇನೆ, ವಾರದಲ್ಲಿ ಎರಡು ದಿನಗಳ ಕಾಲ ಕ್ಷೇತ್ರಗಳಲ್ಲಿ ಜನ ಸೇರಿಸಿ ಸಭೆ ಮಾಡಿ ಕಾರ್ಯಕರ್ತರ ಸಲಹೆ ಪಡೆದು ಪಕ್ಷ ಬಲವರ್ಧನೆ ಗೊಳಿಸೋಣ ಎಂದರು ಅಲ್ದೇ ಯಾರೋ ಒಂದಿಬ್ಬರು ನಮ್ಮ ಬಗ್ಗೆ ಹಗುರವಾಗಿ ಮಾತಾಡ್ತಾರೆ ಅಂದ್ರೆ ಅವರ‌ ಬಗ್ಗೆ ನಾವು ತಲೆಕೆಡೆಸಿಕೊಳ್ಳುವ ಅಗತ್ಯ ಇಲ್ಲ ಕೇಂದ್ರದವರು ಕಣ್ಮುಚ್ಚಿ ಕೂತಿದ್ದಾರೆಂದು ನಾವು ಭಾವಿಸೋ ಅಗತ್ಯತೆಯೂ ಇಲ್ಲ, ಸೂಕ್ತ ಸಂದರ್ಭದಲ್ಲಿ ಯಾರು ಯಾರಿಗೆ ಏನ್ ಕ್ರಮ ಮಾಡಬೇಕೋ ಅದನ್ನು ಮಾಡಲು ಅಮಿತ್ ಶಾ ಮತ್ತೆ ಮೋದಿ ಸಿದ್ದರಾಗಿದ್ದಾರೆ.

ನಮ್ಮ ರಾಷ್ಟ್ರೀಯ ನಾಯಕರ ಮೇಲೆ ನಿಮಗೆ ಯಾವುದೇ ಸಂಶಯ ಬೇಡ ಎಂದು ಮಾಜಿ ಶಾಸಕರೆದರು ಸಭೆಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ.

ಯತ್ನಾಳ್ ವಿರುದ್ಧ ಕ್ರಮ ಇನ್ನೂ ಆಗದ ಬಗ್ಗೆ ಸಭೆಯಲ್ಲಿ ದನಿ ಎತ್ತಿದ ಮಾಜಿ ಸಚಿವ ರೇಣುಕಾಚಾರ್ಯ, ಇಷ್ಟು ಕಾಲ ಬಹಿರಂಗವಾಗಿ ಪಕ್ಷದ ನಾಯಕತ್ವ ಬಗ್ಗೆ ಹಗುರವಾಗಿ ಅವರ ತಂಡ ಮಾತಾಡ್ತಿದೆ ಆದ್ರೂ ಯಾಕೆ ಕ್ರಮ ಆಗ್ತಿಲ್ಲ ಅವರ ಮೇಲೆ, ಹೈಕಮಾಂಡ್ ಗಮನಕ್ಕೆ ಎಲ್ಲವೂ ಇದೆ, ಆದ್ರೂ ಕ್ರಮ ಕೈಗೊಳ್ಳಲು ವಿಳಂಬ ಆಗ್ತಿದೆ , ಯತ್ನಾಳ್ ತಂಡದ ಮೇಲೆ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ಒತ್ತಡ ತರಬೇಕೆಂದು ಸಭೆಯಲ್ಲಿ ಸಲಹೆ ಕೊಟ್ಟ ರೇಣುಕಾಚಾರ್ಯ.

ಇನ್ನೂ ಸಭೆಯಲ್ಲಿ ಸಂಘಟನೆ ದೃಷ್ಟಿಗೆ ಹೆಚ್ಚು ಒತ್ತು ನೀಡಿ ನಿಮ್ಮ ಕ್ಷೇತ್ರದ ಸಮಸ್ಯೆ ಸಂಘಟನೆ ಬಗ್ಗೆ ನನ್ನ ಜೊತೆ ಮುಕ್ತವಾಗಿ ಚರ್ಚೆ ಮಾಡಿ ಎಂದು ಮಾಜಿ ಸಚಿವರು ಮತ್ತು ಮಾಜಿ ಶಾಸಕರಿಗೆ ವಿಜಯೇಂದ್ರ ಸಭೆಯಲ್ಲಿ ಹೇಳಿದ್ದಾರೆ. ಸಭೆಯಲ್ಲಿ ಭಿನ್ನರ ಬಗ್ಗೆ ತಾವು ಮಾತನಾಡಲಿಲ್ಲ ಹಾಗೇ ಸಭೆಯಲ್ಲಿ ಹೆಚ್ಚು ಭಿನ್ನರ ಬಗ್ಗೆ ಚರ್ಚೆ ಬೇಡ ಎಂದು ತಾಕೀತು ಮಾಡಿದ್ರಂತೆ, ಯತ್ನಾಳ್ ತಂಡದ ವಿಚಾರದಲ್ಲಿ ಯಾರೂ ಬಹಿರಂಗವಾಗಿ ಮಾತನಾಡೋದು ಬೇಡ ಎಲ್ಲವೂ ಹೈಕಮಾಂಡ್ ಗಮನಕ್ಕೆ ಇದೆ, ಹೈಕಮಾಂಡ್ ನವ್ರೇ ಇವರ ವಿಚಾರದಲ್ಲಿ ಕ್ರಮ ತಗೋತಾರೆ ನಾವು ಪಕ್ಷ ಸಂಘಟನೆಗೆ ಒತ್ತು ಕೊಡೋಣ ಎಂದು ಹೇಳಿದ್ದಾರೆ ಈ ಮೂಲಕ ರಾಜ್ಯಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಎಚ್ಚರಿಕೆ ನಡೆಯನ್ನ ವಿಜಯೇಂದ್ರ ಇಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

10/01/2025 11:02 pm

Cinque Terre

6.28 K

Cinque Terre

0

ಸಂಬಂಧಿತ ಸುದ್ದಿ