ನೆಲಮಂಗಲ: ಕಳೆದ ರಾತ್ರಿ ನೆಲಮಂಗಲದ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ಸೀಗೇಪಾಳ್ಯ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದೆ. ನಾಯಿಯನ್ನ ಹೊತ್ತೊಯ್ಯಲು ಬರುವ ಚಿರತೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯವನ್ನು ಗ್ರಾಮಸ್ಥರೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಹೌದು, ಶಿವಗಂಗೆ ಬೆಟ್ಟದ ಬಳಿ ಚಿರತೆ ಮಹಿಳೆಯೋರ್ವಳನ್ನು ಬಲಿ ಪಡೆದ ಬಳಿಕ ನೆಲಮಂಗಲ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಸಹಿತ 80 ಮಂದಿ ಸಿಬ್ಬಂದಿ ಚಿರತೆ ಸೆರೆ ಕಾರ್ಯಾಚರಣೆಗೆ ಪಣತೊಟ್ಟು ಚಿರತೆ ಚಲನವಲನ ತಿಳಿಯಲು ಹಲವೆಡೆ ಸಿಸಿ ಕ್ಯಾಮೆರಾ ಅಳವಡಿಸಿ 8 ಬೋನಿಟ್ಟು 3 ಚಿರತೆಗಳನ್ನ ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಿಟ್ಟಿದ್ರು. ಇದ್ರಿಂದ ಗ್ರಾಮಸ್ಥರು ಕೊಂಚ ನಿಟ್ಟುಸಿರು ಬಿಟ್ಟಿದ್ರು.
ಆದ್ರೆ, ನಿನ್ನೆ ರಾತ್ರಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಬೆಟ್ಟದ ತಪ್ಪಲಲ್ಲಿ ಇನ್ನೂ ಚಿರತೆಗಳಿರುವ ಶಂಕೆಯಿದೆ. ಈ ಸಂಬಂಧ ನೆಲಮಂಗಲ ಅರಣ್ಯ ಇಲಾಖೆ ಮತ್ತೆ ಬೋನಿಟ್ಟು ಚಿರತೆಗಳನ್ನ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
PublicNext
10/01/2025 04:39 pm