ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಆಶಾ ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸುವಂತೆ ಸರಕಾರಕ್ಕೆ ಶಾಸಕ ಗಂಟಿಹೊಳೆ ಮನವಿ

ಬೈಂದೂರು: ಆಶಾ ಕಾರ್ಯಕರ್ತರ ಸೇವೆ ಆರೋಗ್ಯ ಕ್ಷೇತ್ರದಲ್ಲಿ ಗುರುತರವಾದ ಪಾತ್ರ ವಹಿಸಿದೆ. ಸಾರ್ವಜನಿಕರು ಹಾಗೂ ಆರೋಗ್ಯ ಸಂಸ್ಥೆಗಳ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಗಾಗಿ ಆಶಾ ಕಾರ್ಯಕರ್ತರು ಸಮಾಜದಲ್ಲಿ ಗೌರವಯುತವಾಗಿ ಬದುಕಲು ಪೂರಕ ವಾತಾವರಣ ಕಲ್ಪಿಸಬೇಕು. ಅವರ ಬೇಡಿಕೆಯಂತೆ ಅಗತ್ಯ ವಸ್ತುಗಳ ನಿಯಮಿತ ಬೆಲೆ ಏರಿಕೆಯಿಂದಾಗಿ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಗೌರವಯುತವಾದ ಗೌರವ ಧನ ಪಾವತಿಗೆ ಸರಕಾರ ಅಗತ್ಯ ಕ್ರಮ ವಹಿಸಲು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಶೆಟ್ಟಿ ಗಂಟಿಹೊಳೆಯವರು ರಾಜ್ಯ ಸರಕಾರಕ್ಕೆ ಮನವಿ ಮಾಡಿರುತ್ತಾರೆ.

ಈಗಾಗಲೇ ರಾಜ್ಯಾದ್ಯಂತ ಸಾವಿರಾರು ಆಶಾ ಕಾರ್ಯಕರ್ತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿರುತ್ತಾರೆ. ಇದರಿಂದ ಆರೋಗ್ಯ ಸಂಬಂಧಿತ ಸೇವೆಗೆ ತೊಡಕಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಆಶಾ ಕಾರ್ಯಕರ್ತರ ಸಂಕಷ್ಟ ಆಲಿಸಬೇಕು ಎಂದರು,

ಮೊಬೈಲ್ ತಂತ್ರಾಂಶ ಆಧಾರಿತ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಹೇರದೇ ನೌಕರರಿಗೆ ಕನಿಷ್ಠ ಜೀವನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ನಿವೃತ್ತಿ ಸೌಲಭ್ಯ, ಭವಿಷ್ಯ ನಿಧಿ, ವಿಮೆ ಸೇರಿದಂತೆ ಇನ್ನಿತರ ಕನಿಷ್ಠ ಸೇವಾ ಸೌಲಭ್ಯಗಳನ್ನು ಒದಗಿಸಬೇಕೆಂದು ಇದೇ ಸಂದರ್ಭದಲ್ಲಿ ಶಾಸಕರು ಸರಕಾರವನ್ನು ಆಗ್ರಹಿಸಿದ್ದರು

Edited By : PublicNext Desk
Kshetra Samachara

Kshetra Samachara

08/01/2025 09:05 pm

Cinque Terre

704

Cinque Terre

0

ಸಂಬಂಧಿತ ಸುದ್ದಿ