ಹಾಸನ: ಕಳೆದ ಹಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ನಕ್ಸಲರು ಪೊಲೀಸರಿಗೆ ಶರಣಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಹಾಸನ ನಗರದ ಹೋರ ವಲಯದ ಭುವನಹಳ್ಳಿ ಬೈ ಪಾಸ್ ಬಳಿ ಭಾರಿ ಭದ್ರತೆಯೊಂದಿಗೆ ತೆರಳಿದರು.
ಹತ್ತಾರು ಪೊಲೀಸ್ ವಾಹನಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ನಕ್ಸಲರನ್ನು ಕರೆದುಕೊಂಡು ತೆರಳಿದ ವೇಳೆ ಹಾಸನ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ನಗರದ ತಣ್ಣೀರು ಹಳ್ಳ ವೃತ್ತ, ಸಂತಿಪೇಟೆ ಬೈಪಾಸ್, ಚನ್ನಪಟ್ಟಣ ಬೈಪಾಸ್, ಬುವನಹಳ್ಳಿ ಬೈ ಪಾಸ್ ಉದ್ದಕ್ಕೂ ಸೂಕ್ತ ಭದ್ರತೆಯೊಂದಿಗೆ ಹತ್ತಾರು ಪೊಲೀಸ್ ವಾಹನಗಗಳೊಂದಿಗೆ ನಕ್ಸಲರನ್ನು ಬೆಂಗಳೂರಿಗೆ ಕರೆದೊಯ್ದರು.
Kshetra Samachara
08/01/2025 04:15 pm